ಭಾನುವಾರ, ಆಗಸ್ಟ್ 2, 2020

ಪ್ರೈಡ್ ಅಂಡ್ ಪ್ರೆಜುಡೀಸ್ ಬರಹ: ಸಂಧ್ಯಾ ಸಿದ್ಧವನಹಳ್ಳಿ

ಭಾವ ಸಂಗಮಕ್ಕಾಗಿ ಬರೆದುದು
ಪ್ರೈಡ್ ಅಂಡ್ ಪ್ರೆಜುಡೀಸ್

   ಕೆಲವು  ಕತೆಗಳು, ಕಾದಂಬರಿಗಳು ದಶಕಗಳ  ಕಳೆದರೂ  ಅದರ  ರಸಾನುಭೂತಿ  ನವ್ಯ ನವೀನವಾಗಿರುವುದು .  ಈ  ಕಾದಂಬರಿಯ  ಮೊದಲ  ಮುದ್ರಣವಾಗಿ  ಇನ್ನೂರು  ವರ್ಷಗಳಿಗೂ   ಹೆಚ್ಚಾಗಿದೆ.  ಈ  ಕಾದಂಬರಿಯ  ಲೇಖಕಿ  ಜೇನ್  ಆಸ್ಟೀನ್.  ಸುಮಾರು  ಐವತ್ತೇಳು  ವರ್ಷಗಳ  ಹಿಂದೆ  ನನ್ನ  ಸಹೋದರಿಗೆ  ಇದು ಪಠ್ಯ ಪುಸ್ತಕವಾಗಿತ್ತು. ನಾನೂ ನನ್ನ ತಂಗಿ  ಅಕ್ಕನಿಂದ  ಕತೆ  ಹೇಳಿಸಿಕೊಂಡಿದ್ದೆವು .  ಕಳೆದು ಹೋದ ದಿನಗಳು  ಅವು .  ಎರಡು  ಮೂರು  ಬಾರಿ  ಓದಿದ್ದೇನೆ.  ಪ್ರತಿಯೊಂದು   ಸಲವೂ  ಹೊಸ ದೃಷ್ಟಿಕೋನ ಮನದಲ್ಲಿ ಮೂಡುತ್ತಿತ್ತು.  ಇತ್ತೀಚೆಗೆ  ಓದಿದಾಗ  ಅದೇ  ಹೊಸ  ಅನುಭೂತಿ ಉಂಟಾಯಿತು .   ನಾನು  ಅಂದು ನನ್ನ ಅನಿಸಿಕೆ  ಬರೆದಿಟ್ಟುಕೊಂಡಿದ್ದಕ್ಕೂ  ಇಂದು  ನಾನು  ಬರೆದಿರುವುದಕ್ಕೂ  ತುಲನೆ  ಮಾಡಿದಾಗ ನನ್ನ ದೃಷ್ಟಿಕೋನದಲ್ಲಿ ವ್ಯತ್ಯಾಸವಿದೆ  ಅನಿಸಿತು. 
   I was young  then .  Mesmerised by the heroine.  Of course  the  conversation. 
          ಎಲಿಜಬೆತ್  ಬೆನೆಟ್ ದಂಪತಿಗಳ  ಮಕ್ಕಳಲ್ಲಿ. ಎರಡನೆಯವಳು.  ಇವಳೇ  ನಮ್ಮ. ಕಥಾನಾಯಕಿ . ಅವಳ ತಂದೆ  ಮಿಸ್ಟರ್  ಬೆನೆಟ್. ಲಾಂಗ್ ಬೌರ್ನ್  ಎಸ್ಟೇಟ್ ನ ಮಾಲಿಕ.  ಅವರಿಗೆ  ಐವರು  ಹೆಣ್ಣುಮಕ್ಕಳು.  ಮೊದಲನೆಯ  ಮಗಳು  ಜೇನ್ . ಬಹಳ  ಸೌಮ್ಯ   ನಾಚಿಕೆ  ಹೆಚ್ಚು. ಮೇರಿ, ಕಿಟ್ಟಿ , ಲಿಡಿಯ  ಉಳಿದ. ಮೂವರು . ವಾರಸುದಾರ  ಇಲ್ಲದ  ಕಾರಣ  ಅವರ  ಆಸ್ತಿ. ಅವರ  ನಂತರ  ಬಂಧುವಿಗೆ  ಹೋಗುವುದು .  ಬೆನೆಟ್  ದಂಪತಿಗಳಿಗೆ  ಮಕ್ಕಳ  ಭವಿಷ್ಯದ  ಚಿಂತೆ .    
   ಲಾಂಗ್ ಬೌರ್ನ್  ಎಸ್ಟೇಟ್  ಹತ್ತಿರದಲ್ಲಿದ್ದ  ನೆದರ್ ಫೀಲ್ಡ್ ಎಸ್ಟೇಟ್ ಗೆ  ಮಿಸ್ಟರ್. ಬಿಂಗ್ಲೀ ತನ್ನ ಸಹೋದರಿಯರು ಮತ್ತು  ಸ್ನೇಹಿತ  ಡಾರ್ಸಿಯ ಜೊತೆ  ಬಂದಿದ್ದಾನೆ.  ಮಿಸೆಸ್. ಬೆನೆಟ್  ಬಿಂಗ್ಲಿಯ  ಪರಿಚಯ ಮಾಡಿಕೊಳ್ಳಲು  ಬಲವಂತವಾಗಿ  ಪತಿಯನ್ನು. ಕಳಿಸುತ್ತಾಳೆ.  ಬಿಂಗ್ಲಿಯ  ವಿವಾಹವಾಗಿಲ್ಲ  ಹಾಗೂ  ಅವನು  ಶ್ರೀಮಂತ  ಎಂದು  ಆ. ಊರಿಗೆ. ಈಗಾಗಲೇ. ಗೊತ್ತಾಗಿದೆ .  ಪರಿಚಯ  ಬೆಳೆದು  ತಮ್ಮ  ಮಕ್ಕಳಲ್ಲಿ  ಯಾರನ್ನಾದರೂ  ಮದುವೆ ಆಗಲಿ  ಎಂಬ  ಆಸೆ .  ಅದರಿಂದ  ಉಳಿದವರಿಗೂ  ಆಸರೆ  ಮತ್ತು  ಮೇಲಾಗುವುದೆಂಬ  ಆಸೆ.
  ಬೆನಟ್ ಪರಿವಾರಕ್ಕೆ  ಬಿಂಗ್ಲಿಯ  ಮತ್ತು  ಅವನ  ಸ್ನೇಹಿತನ ಪರಿಚಯವಾಗುವುದು.   ಚಿಕ್ಕ ಊರಾದುದರಿಂದ  ದಿನವೂ ಯಾವುದೋ ಒಂದು  ಪಾರ್ಟಿ  ಇರುತ್ತಿತ್ತು.  ಎಲ್ಲಾ  ಪರಿವಾರಗಳು  ಸೇರುತ್ತಿದ್ದರು.  ಎಲ್ಲರಿಗೂ  ಬಿಂಗ್ಲಿ  ಇಷ್ಟವಾದ . ಅವನ  ಸ್ನೇಹಿತ  ಡಾರ್ಸಿ  ಮೌನಿ ಮತ್ತು  ಎಲ್ಲರೊಡನೆ  ಬೆರೆಯುತ್ತಿರಲಿಲ್ಲ.   ಅವನು  ಬಿಂಗ್ಲಿಗಿಂತಲೂ   ಹೆಚ್ಚು  ಶ್ರೀಮಂತ.  ಅವನಿಗೆ  ಮಿಸೆಸ್. ಬೆನೆಟ್  ಮತ್ತು  ಮಕ್ಕಳ  ನಡೆ ನುಡಿ ಹಿಡಿಸಿರಲಿಲ್ಲ.  ಅವರ ಮತ್ತು  ತನ್ನ. ಸ್ಥಾನ ಮಾನದಲ್ಲಿ  ಅಜಗಜಾಂತರ  ಎಂಬ  ಭಾವನೆ .  ಎಲಿಜಬೆತ್ ಜೊತೆಯಲ್ಲಿ   ಡ್ಯಾನ್ಸ್ ಮಾಡಲು  ನಿರಾಕರಿಸುತ್ತಾನೆ . ಎಲಿಜಬೆತ್  ಬಹಳ  ಸಾಮಾನ್ಯ ಹುಡುಗಿ. ಅವಳಲ್ಲಿ  ಆಸಕ್ತಿ  ಮೂಡಿಸುವಂಥ ವಿಶೇಷವೇನೂ  ಇಲ್ಲ  ಎಂದು ಡಾರ್ಸಿ  ಹೇಳುವುದನ್ನು  ಎಲಿಜಬೆತ್  ಕೇಳಿಸಿಕೊಳ್ಳುತ್ತಾಳೆ .   ಡಾರ್ಸಿ ಯನ್ನು  ಕಂಡರೆ  ಎಲಿಜಬೆತ್ ಗೆ  ಆಗುವುದಿಲ್ಲ. 
     ಕೆಲವು  ಭೇಟಿಗಳ ನಂತರ  ಎಲಿಜಬೆತ್ ಕಣ್ಣುಗಳಲ್ಲಿ. ಹೊಳಪು,  ಉತ್ಸಾಹ ಮತ್ತು  ಬುದ್ಧಿವಂತಿಕೆ  ಮೆಚ್ಚುತ್ತಾನೆ.  ಆದರೆ  ಎಲಿಜಬೆತ್  ಮನದಲ್ಲಿ  ಡಾರ್ಸಿಯ ಬಗ್ಗೆ  ಸದ್ಭಾವನೆ  ಇಲ್ಲ . 
    ಜೇನ್  ಮತ್ತು. ಬಿಂಗ್ಲಿಯ  ನಡುವೆ  ಒಲವು  ಮೂಡಿದೆ.  ಸಂಕೋಚ ಮತ್ತು  ನಾಚಿಕೆಯ ಸ್ವಭಾವದ ಜೇನ್ ಬಿಂಗ್ಲಿಯ ಒಲವು  ಗೊತ್ತಿದ್ದರೂ  ತನ್ನ  ಒಲವನ್ನು ಬಿಚ್ಚುಮನಸ್ಸಿನಿಂದ  ತೋರುವುದಿಲ್ಲ.  ಇದೇ ಮಾತನ್ನು ಎಲಿಜಬೆತ್ ಗೆಳತಿ ಚಾರ್ಲೆಟೆ  ಹೇಳುತ್ತಾಳೆ.  ಬೆನೆಟ್ ಪರಿವಾರದ  ದೂರದ ಬಂಧು ಕಾಲಿನ್ಸ್ ಲಾಂಗ್ ಬೌರ್ನ್ ಗೆ ಬರುತ್ತಾನೆ. ಬೆನೆಟ್ ನಂತರ  ಆಸ್ತಿ  ಅವನಿಗೇ ಹೋಗುವುದು. ಅವನು  ಒಬ್ಬ  ಪಾದ್ರಿ. ಅಕ್ಕ ತಂಗಿಯರಿಗೆ  ಅವನ  ಮಾತಿನ  ಧೋರಣೆ ಇಷ್ಟವಾಗುವುದಿಲ್ಲ . 
  ಕಿಟ್ಟಿ  ಮತ್ತು  ಲಡಿಯ ವಿಕ್ ಹ್ಯಾಮ್  ಎನ್ನುವನನ್ನು ಭೇಟಿ ಆಗುತ್ತಾರೆ.  ಅಲ್ಲಿಯ  ಮಿಲಿಟರಿ  ರೆಜಿಮೆಂಟ್ ನಲ್ಲಿ  ಇರುತ್ತಾನೆ  ವಿಕ್ ಹ್ಯಾಮ್.  ಎಲಿಜಬೆತ್ ಸಹ ಅವನನ್ನು  ಭೇಟಿ  ಮಾಡುತ್ತಾಳೆ.  ಡಾರ್ಸಿ ತನಗೆ  ಸಲ್ಲಬೇಕಾಗಿದ್ದ  ಆಸ್ತಿಯನ್ನು ಕೊಡಲಿಲ್ಲ.  ತನಗೆ  ಮೋಸ  ಮಾಡಿದ್ದಾನೆ ಎಂದು  ಹೇಳುತ್ತಾನೆ.  ಎಲಿಜಬೆತ್ ಅವನನ್ನು  ನಂಬುತ್ತಾಳೆ .  ಮೊದಲೇ  ಡಾರ್ಸಿಯನ್ನು  ಕಂಡರೆ ಆಗುವುದಿಲ್ಲ.  ಉರಿಯುವ  ಬೆಂಕಿಗೆ  ತುಪ್ಪ  ಸುರಿದಂತಾಯಿತು. 
  ಪಾರ್ಟಿಯಲ್ಲಿ  ಡಾರ್ಸಿಯ ಜೊತೆ ಘರ್ಷಣೆ ,  ಅವಮಾನದಿಂದ  ಕುಪಿತಳಾಗಿರುವ ಎಲಿಜಬೆತ್ ಳನ್ನು ಕಾಲಿನ್ಸ್  ಮದುವೆಯಾಗುವಂತೆ  ಕೇಳುತ್ತಾನೆ .  ಅವಳು  ನಿರಾಕರಿಸುತ್ತಾಳೆ.  ಕಾಲಿನ್ಸ್  ಚಾರ್ಲೆಟೆ ಯನ್ನು  ಮದುವೆಯಾಗಲು  ಕೇಳುತ್ತಾನೆ.  ಪ್ರೀತಿಗಾಗಿ  ಅಲ್ಲ.  ಮದುವೆ ಆಗದೆ ಉಳಿದರೆ ಅನ್ನುವ  ಯೋಚನೆ.  
    ಬಿಂಗ್ಲಿ ಲಂಡನ್ ಗೆ  ಹಿಂದಿರುಗಿದ  ಸುದ್ಧಿ ತಿಳಿಯುತ್ತದೆ.  ಜೇನಳಲ್ಲಿ  ಒಲವು  ತೋರಿದ್ದು  ಬಿಂಗ್ಲಿ  ಅವಳಿಗೂ  ತಿಳಿಸದೆ ಹೊರಟುಹೋಗಿದ್ದ.  ಅವನ ತಂಗಿ ಕ್ಯಾರೋಲಿನ್  ಜೇನ್ ಗೆ ಪತ್ರದಲ್ಲಿ  ತಾವು  ಪನಃ  ಅಲ್ಲಿಗೆ  ಬರುವುದಿಲ್ಲವೆಂದು  ತಿಳಿಸುತ್ತಾಳೆ.  ಜೇನ್ ತನ್ನ  ದುಃಖವನ್ನು ತೋರುವುದಿಲ್ಲ. ಎಲಿಜಬೆತ್ ಇದು  ಡಾರ್ಸಿ ಮತ್ತು ಕ್ಯಾರೋಲಿನ್ ಅವರ ಕೆಲಸ ಎಂದು ಭಾವಿಸುತ್ತಾಳೆ .

ಲಾಂಗ್ ಬೌರ್ನ್ ಗೆ ಗಾರ್ಡನರ್ಸ್ ಎಂಬ  ಹತ್ತಿರದ  ಬಂಧುಗಳು  ಬರುತ್ತಾರೆ .   ಅವರು  ಜೇನ್ ಮನಸ್ಥಿತಿಯನ್ನು   ನೋಡಿ  ಅವಳನ್ನು  ತಮ್ಮೊಡನೆ  ಲಂಡನ್ ಗೆ  ಕರೆದುಕೊಂಡು ಹೋಗುತ್ತಾರೆ.
    ಎಲಿಜಬೆತ್ ಚಾರ್ಲೆಟೆಯನ್ನು  ನೋಡಲು  ಅವಳ  ಊರಿಗೆ  ಹೋಗುತ್ತಾಳೆ.  ರೋಸಿಂಗ್ಸ್ ನಲ್ಲಿ  ಲೇಡಿ ಕ್ಯಾಥರೀನ್  ಭೇಟಿ ಆಗುತ್ತೆ.  ಡಾರ್ಸಿ ತನ್ನ  ಬಂಧು ವಿಲಿಯಮ್  ಜೊತೆ  ಅಲ್ಲಿಗೆ  ಬರುತ್ತಾನೆ.  ಡಾರ್ಸಿಯೆಂದರೆ  ವಿಲಿಯಮ್ ಗೆ  ಮೆಚ್ಚುಗೆ .  ಡಾರ್ಸಿ ತನ್ನ  ಸ್ನೇಹಿತ ನನ್ನು  ಅವಿವೇಕದ  ಮದುವೆಯ ಬಂಧನದಿಂದ ತಪ್ಪಿಸದನೆಂದು ಹೇಳುತ್ತಾನೆ.  ಎಲಿಜಬೆತ್ ಗೆ ಅದು ಯಾರೆಂದು  ತಿಳಿಯುತ್ತದೆ.  ಡಾರ್ಸಿ  ದಿನವೂ  ಎಲಿಜಬೆತ್  ವಾಕಿಂಗ್ ಹೋಗುವ  ಸಮಯ ತಿಳಿದು ಅವಳನ್ನು  ದಿನವೂ  ಭೇಟಿ  ಮಾಡುತ್ತಿರುತ್ತಾರೆ.  ಅವನ  ಮೆಚ್ಚುಗೆಯ  ನೋಟವಾಗಲಿ,  ಸ್ನೇಹಮಯಿ ಮಾತುಗಳಾಗಲೀ  ಎಲಿಜಬೆತ್ ಳ  ಗಮನಕ್ಕೆ  ಬರುವುದಿಲ್ಲ.  ವಿಲಿಯಮ್  ಬಿಂಗ್ಲಿ ಮತ್ತು  ಜೇನ್ ವಿಷಯ  ಹೇಳಿದಂದು   ತಲೆನೋವೆಂದು  ರೋಸಿಂಗ್ಸ್ ಗೆ  ಡಿನ್ನರ್ ಗೆ  ಹೋಗುವುದಿಲ್ಲ.
   ಡಾರ್ಸಿ ಎಲಿಜಬೆತ್ ಒಬ್ಬಳೇ  ಇರುವಾಗ  ಭೇಟಿಯಾಗಲು  ಬರುತ್ತಾನೆ.  ತಮ್ಮಿಬ್ಬರ ನಡುವಿನ ಸಮಾಜದಲ್ಲಿ  ಸ್ಥಾನಮಾನಗಳ ಅಂತರವಿದ್ದರೂ ತಾನು  ಅವಳನ್ನು  ಮದುವೆಯಾಗಲು  ಬಯಸುತ್ತೇನೆ  ಎಂದು  ಎಲಿಜಬೆತ್ ಗೆ  ಹೇಳುತ್ತಾನೆ .    ( ಇದೆಂತಹ  ಮ್ಯಾರೇಜ್  ಪ್ರಪೋಸಲ್. ಅರಸಿಕ, ಅಹಂಭಾವಿ  ಈ ನಮ್ಮ ಹೀರೋ  )  ಎಲಿಜಬೆತ್ ಗೆ ಅವನ ಅಹಂಕಾರ,  ದುರಭಿಮಾನ ನೋಡಿ ಕೋಪ ಬಂತು. ಜೇನ್ ಳ ಪ್ರೇಮದ ಮಹಲನ್ನು ನುಚ್ಚು ನೂರಾಗಿಸಿದ್ದು,  ವಿಕ್ ಹ್ಯಾಮ್ ನನ್ನು  ವಂಚಿಸಿದ್ದು
  ನೀನು . ಎಂದು ಅವನನ್ನು ನಿರಾಕರಿಸುತ್ತಾಳೆ.  ಡಾರ್ಸಿ ಅಪ್ರತಿಭನಾದ.  ಮಾರನೆಯ ದಿನ ಎಲಿಜಬೆತ್ ಗೆ ವಾಕಿಂಗ್ ನಲ್ಲಿ ಭೇಟಿಯಾಗಿ ಪತ್ರವನ್ನು  ಕೊಟ್ಟು ಹೋಗುತ್ತಾನೆ.  ಅದರಲ್ಲಿ  ಮೊದಲನೆಯದಾಗಿ  ಜೇನ್ ತನ್ನ  ಮನದಿಂಗಿತವನ್ನು  ಯಾವ ರೀತೀಯಲ್ಲೂ  ತೋರಿಸಿರಲಿಲ್ಲ.  ಹೇಳಲಿಲ್ಲ.  ವಿಕ್ ಹ್ಯಾಮ್ ವಿಷಯಕ್ಕೆ ಬಂದರೆ  - -  ವಿಕ್ ಹ್ಯಾಮ್ ತಂದೆ  ಡಾರ್ಸಿಯ ತಂದೆಯ ಬಳಿ ಕೆಲಸ  ಮಾಡುತ್ತಿದ್ದರು .  ಡಾರ್ಸಿಯ ತಂದೆ  ಸಾಯುವ  ಮುಂಚೆ  ವಿಕ್ ಹ್ಯಾಮ್ ಜೀವನಕ್ಕೆ  ಆಧಾರ  ಕಲ್ಪಿಸಲು  ಹೇಳಿದ್ದರು. ಆದರೆ  ಚರ್ಚ್ ನಲ್ಲಿ  ಸೇರಿದರೆ ಮಾತ್ರ ಸಹಾಯ  ಮಾಡಬೇಕೆಂದು ಹೇಳಿದ್ದರು.  ವಿಕ್ ಹ್ಯಾಮ್ ತಾನು ಲಾ ಓದುವುದಾಗಿ  ಮೂರು ಸಾವಿರ ಪೌಂಡ್ ಡಾರ್ಸಿಯಿಂದ  ಪಡೆದ. ಹಣವೆಲ್ಲವನ್ನೂ ಐಷಾರಾಮದಲ್ಲಿ  ಕಳೆದುಕೊಂಡ . ಪುನಃ ಹಣ ಕೇಳಲು ಡಾರ್ಸಿ ನಿರಾಕರಿಸಿದ. ಅದನ್ನೇ  ನೆಪ ಮಾಡಿ  ಇನ್ನೂ  ಚಿಕ್ಕ ಹುಡುಗಿ ಡಾರ್ಸಿಯ ತಂಗಿ ಜಾರ್ಜಿಯನಳನ್ನು  ಮಾಯ ಮಾತುಗಳಿಂದ  ಮರಳು  ಮಾಡಿ,  ಡಾರ್ಸಿ ಊರಲ್ಲಿ ಇಲ್ಲದ ಸಮಯ ನೋಡಿ ಮನೆಯಿಂದ  ಕರೆದುಕೊಂಡು ಹೋಗುವುದರಲ್ಲಿದ್ದ.   ಡಾರ್ಸಿಯ  ಮುನ್ನೆಚ್ಚರಿಕೆಯಿಂದ ಅದು ತಪ್ಪಿತು ಎಂದು ಸುದೀರ್ಘ  ಪತ್ರ  ಬರೆದಿದ್ದ .  ಮೊದಲು  ಎಲಿಜಬೆತ್ ನಂಬುವುದಿಲ್ಲ.  ಯೋಚಿಸುತ್ತಿರಲು  ಡಾರ್ಸಿಯನ್ನು  ಭೇಟಿಯಾದಗಲೆಲ್ಲಾ ವಿಕ್ ಹ್ಯಾಮ್ ನ ನಡವಳಿಕೆಯಲ್ಲಿ  ಭೀತಿ ಇರುತ್ತಿದ್ದುದು ನೆನಪಾಯಿತು.  ಅವನನ್ನು  ತಾನು  ತಪ್ಪಾಗಿ ತಿಳಿದು ಸದಭಿಪ್ರಾಯದಿಂದ  ಕಾಣುತ್ತಲೇ ಇರಲಿಲ್ಲ ಎಂದು ಎಲಿಜಬೆತ್ ಅರಿವಿಗೆ ಬರುತ್ತೆ.
    ಜೇನ್  ಲಂಡನ್ ನಲ್ಲಿ  ಬಿಂಗ್ಲಿಯ ತಂಗಿ ಕ್ಯಾರೋಲಿನ್ ಅನ್ನು  ಭೇಟಿ  ಮಾಡುತ್ತಾಳೆ.  ಅವಳು  ಜೇನ್ ಳನ್ನು  ಉದಾಸೀನವಾಗಿ  ನೋಡುತ್ತಾಳೆ.  ಬಿಂಗ್ಲಿ  ತನ್ನನ್ನು  ಭೇಟಿ  ಮಾಡಲು  ಬರುವನೆಂದು  ಜೇನ್  ಕಾಯುತ್ತಾಳೆ.  ಬಿಂಗ್ಲಿ ಗೆ ಗೊತ್ತಿರುವುದಿಲ್ಲ.  ಊರಿಗೆ  ಹಿಂತಿರುಗಿ  ಬರುತ್ತಾಳೆ.
   ಲಿಡಿಯಾ  ಮಿಲಿಟರಿ ಕ್ಯಾಂಪ್ ಗೆ ಹೋಗುವುದು. ಪಾರ್ಟಿ ಗಳಿಗೆ ಹೋಗುವುದು  ಹೆಚ್ಚಾಗಿತ್ತು.  ಮಿಸೆಸ್ಪಾ. ಪಾರ್ಕ್ ರ್ ಅವರಿಗೆ ಬ್ರೈಟನ್ ಗೆ  ವರ್ಗವಾಗಿತ್ತು.  ಲಿಡಿಯಾಳನ್ನು  ತಮ್ಮೊಡನೆ  ಬರಲು  ಹೇಳಿದರು. ಎಲಿಜಬೆತ್ ಲಿಡಿಯಾಳನ್ನು  ಕಳುಹಿಸುವುದು  ಬೇಡವೆಂದು  ತಂದೆಗೆ ಹೇಳಿದಳು . ಮಿಸ್ಟರ್ ಬೆನೆಟ್ ಕಳುಹಿಸುತ್ತಾರೆ .
  ಕೆಲವು. ದಿನಗಳ ನಂತರ  ಎಲಿಜಬೆತ್  ಗಾರ್ಡನರ್ಸ್ ಜೊತೆಯಲ್ಲಿ  ವಿಹಾರ  ಯಾತ್ರೆಗೆ  ಹೋಗುತ್ತಾಳೆ . ಪೆಂಬರ್ಲಿ  ಎಸ್ಟೇಟ್ ಗೆ  ಬರುತ್ತಾರೆ .  ಅದು. ಡಾರ್ಸಿಯ ಎಸ್ಟೇಟ್.  ಡಾರ್ಸಿ. ಊರಲ್ಲಿ ಇಲ್ಲವೆಂದು  ಗೊತ್ತಾಗುತ್ತೆ.  ಎಸ್ಟೇಟ್ ನಲ್ಲಿ  ಸುತ್ತಾಡುತ್ತಿರುವಾಗ  ಅಲ್ಲಿನ  ಕೆಲಸಗಾರರು   ಡಾರ್ಸಿಯನ್ನು  ಬಹಳ  ಹೊಗಳುತ್ತಾರೆ .   ಎಸ್ಟೇಟ್ ಅನ್ನು ನೋಡುತ್ತಿರುವ  ಸಮಯದಲ್ಲಿ  ಡಾರ್ಸಿ  ಅಚಾನಕ್ಕಾಗಿ  ಬರುತ್ತಾನೆ .  ಅವನ  ನಡತೆಯಲ್ಲಿ  ಬದಲಾವಣೆ  ಬಂದಿದೆ .  ಜಾರ್ಜಿಯಾನ. ನಾಳೆ  ಬರುವಳು  ಅವಳನ್ನು  ನಿನಗೆ  ಪರಿಚಯಿಸಬೇಕು   ಎಂದು  ಹೇಳುತ್ತಾನೆ.  ಜಾರ್ಜಿಯಾನಳ  ಪರಿಚಯವಾಗುವುದು .  ವಾತ್ಸಲ್ಯಭರಿತ  ಮತ್ತು ಜವಾಬ್ದಾರಿಯುತ  ಓರ್ವ  ಸೋದರನನ್ನು  ಕಂಡಳು  ಡಾರ್ಸಿಯಲ್ಲಿ.   ಡಾರ್ಸಿಯ  ಈ  ಪರಿ  ಎಲಿಜಬೆತ್ ಳನ್ನು  ಮೆಚ್ಚಿಸಿತು.
   ಪೆಂಬರ್ಲಿ ಗೆ  ಬಿಂಗ್ಲಿ ಯೂ  ಬರುತ್ತಾನೆ .  ಅವನು  ಜೇನ್ ಳನ್ನು  ಇಂದಿಗೂ  ಪ್ರೇಮಿಸುತ್ತಿದಾನೆ  ಎಂದು  ಎಲಿಜಬೆತ್ ಗೆ  ಅರಿವಾಯಿತು .  ಒಂದು  ದಿನ  ಜೇನ್ ಳಿಂದ  ಪತ್ರ  ಬರುತ್ತದೆ. ಅದರಲ್ಲಿ  ಲಿಡಿಯಾ  ವಿಕ್ ಹ್ಯಾಮ್ ಜೊತೆ  ಓಡಿ ಹೋಗಿದ್ದಾಳೆ  .  ಅವನು ಲಿಡಿಯಾ ಳನ್ನು  ಮದುವೆ  ಆಗುವುದಿಲ್ಲ  ಎಂಬ  ಭಯ ಎಲ್ಲರಿಗೂ.  ಎಲಿಜಬೆತ್ ಳನ್ನು  ತಕ್ಷಣ  ಬರಲು  ಬರೆದಿರುತ್ತಾಳೆ.  ಪತ್ರ  ಓದಿ ಮುಗಿಸುವ ಹೊತ್ತಿಗೆ  ಡಾರ್ಸಿ ಅಲ್ಲಿಗೆ  ಬರುತ್ತಾನೆ . ಆತಂಕ,  ಕಳವಳದಲ್ಲಿ  ಎಲಿಜಬೆತ್ ಡಾರ್ಸಿಗೆ  ಜೇನ್ ಬರೆದ  ಪತ್ರದಲ್ಲಿ  ವಿಷಯ  ಹೇಳುತ್ತಾಳೆ .  ಡಾರ್ಸಿ  ವಿಕ್ ಹ್ಯಾಮ್ ವಿಷಯ  ಮೊದಲೇ  ಹೇಳದಿದ್ದದು  ತನ್ನ  ತಪ್ಪು  ಎಂದು  ಅಂದುಕೊಳ್ಳುತ್ತಾನೆ .
ಎಲಿಜಬೆತ್ ಮತ್ತು  ಗಾರ್ಡನರ್ಸ್ ಹಿಂದಿರುಗಿ  ಬರುತ್ತಾರೆ .  ವಿಕ್ ಹ್ಯಾಮ್  ಜೂಜಾಡಿ. ಸಾವಿರ  ಪೌಂಡ್ ಗಳು  ಸಾಲ  ಮಾಡಿದ್ದಾನೆ  ಎಂದು ಗೊತ್ತಾಗುವುದು . ಲಿಡಿಯಾ ಳನ್ನು  ಹುಡುಕಲು ಮಿಸ್ಟರ್  ಗಾರ್ಡನರ್ ಮತ್ತು  ಮಿಸ್ಟರ್  ಬೆನೆಟ್  ಲಂಡನ್ ಗೆ  ಹೋಗುತ್ತಾರೆ .
*****
ಲಿಡಿಯಾ ಮತ್ತು  ವಿಕ್ ಹ್ಯಾಮ್ ಪತ್ತೆಯಾದರೆಂದು,  ಲಿಡಿಯಾಗೆ  ಅವಳ  ಪಾಲಿನ  ಹಣ ಕೊಟ್ಟರೆ  ಮದುವೆ ಆಗಲು ಒಪ್ಪಿದಾನೆ   ಎಂದು  ಗಾರ್ಡನರ್ ಬರೆಯುತ್ತಾರೆ. ಬೆನೆಟ್ ಗೆ  ಗೊತ್ತು  ವಿಕ್ ಹ್ಯಾಮ್   ಸಾಲವೇ  ಬೆಟ್ಟದಷ್ಟಿದೆ.  ಇಷ್ಟು  ಸಣ್ಣ  ಕೋರಿಕೆ ಇಡಲಾರ.  ವಿಕ್ ಹ್ಯಾಮ್ ಗೆ ಗಾರ್ಡನರ್  ಹಣ ಕೊಟ್ಟಿರಬೇಕೆಂದು  ಬೆನೆಟ್  ಅಂದುಕೊಳ್ಳುತ್ತಾರೆ.   ಮದುವೆಯಾದ ಮೇಲೆ  ಲಿಡಿಯಾ, ವಿಕ್ ಹ್ಯಾಮ್ ಲಾಂಗ್ ಬೌರ್ನ್ ಗೆ  ಬರುತ್ತಾರೆ .  ಮಾತಿನ  ಮಧ್ಯದಲ್ಲಿ ಲಿಡಿಯಾ  ಮದುವೆಗೆ  ಡಾರ್ಸಿ  ಬಂದಿದ್ದನೆಂದು  ಹೇಳುತ್ತಾಳೆ .  ಎಲಿಜಬೆತ್ ಗೆ ಕುತೂಹಲ ,  ಅನುಮಾನ. ಮಿಸೆಸ್. ಗಾರ್ಡನರ್ ಗೆ  ಪತ್ರ  ಬರೆದು ವಿಷಯವೇನೆಂದು  ಕೇಳುತ್ತಾಳೆ .  ಲಿಡಿಯಾ  ಮತ್ತು. ವಿಕ್ ಹ್ಯಾಮ್ ಅನ್ನು  ಪತ್ತೆ ಹೆಚ್ಚಿದ್ದು ಡಾರ್ಸಿ. ವಿಕ್ ಹ್ಯಾಮ್  ಸಾಲಗಳನ್ನೂ  ಡಾರ್ಸಿ  ತೀರಿಸಿದ್ದಾನೆ. ಇದು ಎಲಿಜಬೆತ್ ಮೇಲಿನ  ಪ್ರೇಮದಿಂದ  ಮಾಡಿರುವನು  ಎಂದು ಮಿಸೆಸ್ ಗಾರ್ಡನರ್ ಬರೆಯುತ್ತಾರೆ .  
ಬಿಂಗ್ಲಿ ಮತ್ತು ಡಾರ್ಸಿ ನೆದರ್ ಫೀಲ್ಡ್ ಗೆ  ಬರುತ್ತಾರೆ .  ಕೆಲವು  ದಿನಗಳ ನಂತರ  ಬಿಂಗ್ಲಿ ಜೇನ್ ಳನ್ನು   ತನ್ನನ್ನು  ಮದುವೆಯಾಗಲು  ಕೇಳುತ್ತಾನೆ.  ಡಾರ್ಸಿಯೊಡನೆ  ಏಕಾಂತದಲ್ಲಿ ಮಾತನಾಡಲು  ಎಲಿಜಬೆತ್ ಗೆ ಅವಕಾಶವೇ   ಸಿಗುವುದಿಲ್ಲ.  ಡಾರ್ಸಿ  ಕೆಲಸದ ಮೇಲೆ ಲಂಡನ್ ಗೆ  ಹೋಗುತ್ತಾನೆ .  ಆ  ಸಮಯದಲ್ಲಿ  ಲೇಡಿ. ಕ್ಯಾಥರೀನ್ ಎಲಿಜಬೆತ್ ಳನ್ನು  ಭೇಟಿ  ಮಾಡಲು  ಬರುತ್ತಾರೆ.  ಡಾರ್ಸಿ ಮತ್ತು ಎಲಿಜಬೆತ್ ಮದವೆಯಾಗಲಿದ್ದಾರೆಂದು  ಅವರಿಗೆ  ಸುದ್ಧಿ  ಬಂದಿರುತ್ತದೆ.  ಅವರು ಎಲಿಜಬೆತ್ ಗೆ ಡಾರ್ಸಿ ಯನ್ನು  ಮದುವೆಯಾಗಬಾರದೆಂದು  ಹೇಳುತ್ತಾರೆ.  ಎಲಿಜಬೆತ್ ತಾನು  ಯಾವ ಭರವಸೆಯನ್ನು  ನೀಡುವುದಿಲ್ಲ  ಎಂದು  ಹೇಳುತ್ತಾಳೆ.  ಲೇಡಿ ಕ್ಯಾಥರೀನ್ ಕೋಪಗೊಂಡು  ಹೋಗುತ್ತಾಳೆ .  
  ಡಾರ್ಸಿ ಲಂಡನ್ ನಿಂದ  ಹಿಂದಿರುಗಿ  ಬಂದಿದ್ದಾನೆ.  ಲೇಡಿ  ಕ್ಯಾಥರೀನ್  ಡಾರ್ಸಿಯ ಬಳಿ ಎಲಿಜಬೆತ್ ಳನ್ನು  ಭೇಟಿ ಮಾಡಿದ್ದು,  ತನ್ನೊಡನೆ ಅವಳಾಡಿದ  ಮಾತುಗಳನ್ನು  ಹೇಳುತ್ತಾಳೆ.   ಲೇಡಿ ಕ್ಯಾಥರೀನ್ ಗೆ ತಾನು ಹೇಳುವ  ಮಾತುಗಳಿಂದ  ಡಾರ್ಸಿಗೆ ಎಲಿಜಬೆತ್ ಮೇಲಿನ  ಸಧಭಿಪ್ರಾಯ  ಹೋಗುವುದು ಎಂಬ  ಅಭಿಪ್ರಾಯ.  ಆದರೆ ಅವಳ  ಎಣಿಕೆಗೆ  ತದ್ವಿರುದ್ಧವಾಗುವುದು .   ಡಾರ್ಸಿ ಗೆ ಎಲಿಜಬೆತ್  ತನ್ನನ್ನು  ಪ್ರೇಮಿಸುತ್ತಾಳೆ  ಎಂದು  ಗೊತ್ತಾಗುವುದು . 
ಎಲಿಜಬೆತ್ ಳಲ್ಲಿ  ತನ್ನ  ಪ್ರೇಮ ನಿವೇದನೆ  ಮಾಡಿಕೊಳ್ಳುತ್ತಾನೆ.

ಎಲಿಜಬೆತ್ ತನ್ನ  ಮನದ  ಭಾವನೆಯನೆಯನ್ನು  ವ್ಯಕ್ತಪಡಿಸುತ್ತಾಳೆ.  ಇಬ್ಬರ  ನಡುವಿನ  ಅಹಂಭಾವಕ್ಕೆ  ತೆರೆ  ಬಿದ್ದಿದೆ.  ಡಾರ್ಸಿ ಮತ್ತು  ಎಲಿಜಬೆತ್ ರ ಪ್ರೇಮ ಎರಡು  ಪ್ರಬುದ್ಧ  ಮನಗಳ  ಪ್ರೇಮ.  ಡಾರ್ಸಿ ಮತ್ತು ಎಲಿಜಬೆತ್ ,  ಜೇನ್  ಮತ್ತು  ಬಿಂಗ್ಲಿ ಯರ ಮದುವೆ  ಆಗಿದೆ .  ಕಿಟ್ಟಿ ಅಕ್ಕಂದಿರ ಬಳಿ  ಇದಾಳೆ.  ಅವಳ  ಓದು,  ನಡತೆಯಲ್ಲಿ  ಬಹಳ  ಸುಧಾರಣೆ  ಇದೆ .  ಮೇರಿ  ತಂದೆ  ತಾಯಿಯೊಡನೆ  ಇದಾಳೆ .  ಬೆನೆಟ್  ದಂಪತಿಗಳು  ಸಂತೋಷದಲ್ಲಿ  ಜೀವನ ನಡೆಸುತ್ತಿದ್ದಾರೆ .
ಈ  ಕಾದಂಬರಿಯಲ್ಲಿ  ಬರುವ  ಸನ್ನಿವೇಶಗಳು  ಇಂದಿಗೂ  ಸಮಾಜದಲ್ಲಿ  ನಡೆಯುವ  ವಿಷಯವೇ.  ಎಲಿಜಬೆತ್  ಬುದ್ಧಿವಂತಳು. ಆಕರ್ಷಕ  ವ್ಯಕ್ತಿತ್ವ ಉಳ್ಳವಳು.  ತನ್ನ. ಮನೋಭಾವಗಳನ್ನು  ಅಳುಕಿಲ್ಲದೆ  ಹೇಳುವಳು.  ತಾನು  ಬೇರೆಯವರ ಮನೋಭಾವವನ್ನು  ಮತ್ತು  ಅವರ ನಡವಳಿಕೆಯಿಂದ  ಅವರನ್ನು  ಅರ್ಥ ಮಾಡಿಕೊಳ್ಳಬಲ್ಲೆ  ಎಂಬ ನಂಬಿಕೆ  ಬಲವಾಗಿ ಇರುತ್ತದೆ.  ಆದರೆ  ಡಾರ್ಸಿಯ  ವಿಷಯದಲ್ಲಿ  ಎಡವಿದಳು.  ಡಾರ್ಸಿ ಅಹಂಭಾವಿ  ಯುವಕ. ಬಹಳ  ಜವಾಬ್ದಾರಿಯುತ.   ಅವನ  ದುರ್ಬಲತೆ   ಸಮಾಜದಲ್ಲಿ ಮರ್ಯಾದೆ,  ಶಿಷ್ಟಾಚಾರ ಇವುಗಳಿಗೆ  ಪ್ರಧಾನ್ಯತೆ  ಕೊಡುವಲ್ಲಿ.   ಗಾಂಭೀರ್ಯ ಸ್ವಭಾವದವನು.  ಇವರಿಬ್ಬರ  ಈ  ಮನಃ ಸ್ಥಿತಿಯನ್ನು  ಬಹಳ  ಚೆನ್ನಾಗಿ  ಚಿತ್ರಿಸಿದ್ದಾರೆ  ರಚಯಿತ್ರಿ. 
ಈ  ಕಾದಂಬರಿಯ ಹಿನ್ನೆಲೆ  200 ವರ್ಷಗಳ  ಹಿಂದಿನ  ಸಮಾಜದ   ರೀತಿ ನೀತಿಗಳು .  ಹಿನ್ನೆಲೆ  ಇಂಗ್ಲೆಂಡ್ ಆದರೂ  ಕೆಲವು  ವಿಷಯಗಳು  ಇಂದಿಗೂ  ಸಮಾಜದಲ್ಲಿ. ಕಾಣಬಹುದು . ಸಿರಿವಂತರ  ( ಹಣ)  ಮತ್ತು  ಮಧ್ಯಮ ವರ್ಗದವರ  ಧೋರಣೆ ,  ಧಾರಣೆಯಲ್ಲಿ ಅಂತರ  ಹಾಗೆಯೇ  ಇದೆ.  ಮಕ್ಕಳ  ಭವಿಷ್ಯವನ್ನು. ಕುರಿತು  ತಂದೆ ತಾಯಿಯರ  ಚಿಂತೆ  ಎಂದೆಂದಿಗೂ   ಒಂದೇ  ರೀತಿ.  ಮಿಸೆಸ್. ಬೆನೆಟ್ ಎಲ್ಲಾ ಹೆತ್ತಮ್ಮನಂತೆ  ತನ್ನ  ಮಕ್ಕಳಿಗೆ  ಒಳ್ಳೆಯ,  ಶ್ರೀಮಂತ ಪತಿ ಸಿಗಲೆಂದು  ಆಶಿಸುತ್ತಾಳೆ.  ಅವಳ strategy  -  ಬಿಂಗ್ಲಿ ಜೇನ್ ಳನ್ನು  ನೆದರ್ ಫೀಲ್ಡ್ ಎಸ್ಟೇಟ್ ಗೆ ಬರಲು  ಆಹ್ವಾನ ನೀಡಿರುತ್ತಾನೆ.  ಜೋರಾಗಿ  ಮಳೆ  ಬರುವ  ಮುನ್ಸೂಚನೆ  ಇದ್ದರೂ  ಜೇನ್ ಳನ್ನು  ಕುದುರೆಯ  ಮೇಲೆ  ನೆದರ್ ಫೀಲ್ಡ್ ಗೆ  ಕಳಿಸುತ್ತಾಳೆ.

ಆ ರಾತ್ರಿ  ಅವಳನ್ನು  ಅಲ್ಲಿಯೇ  ಉಳಿಸಿಕೊಳ್ಳುವರೆಂದು   ಆ  ತಾಯಿಗೆ  ಗೊತ್ತು. ಅದರಿಂದ  ಜೇನ್  ಮತ್ತು ಬಿಂಗ್ಲಿ  ಒಟ್ಟಿಗೆ  ಸಮಯ ಕಳೆಯಲು  ಆಗುವುದು. ಇಬ್ಬರ  ನಡುವೆ  ಪ್ರೇಮ ಇನ್ನಷ್ಟು  ಬೆಳೆಯಲು  ಸಾಧ್ಯವಾಗುವುದು  ಎನ್ನುವ ಆಲೋಚನೆ.
   ಲೇಖಕಿ  ಅಂದಿನ  ಸಮಾಜಿಕ  ವ್ಯವಸ್ಥೆಯನ್ನು  ತನ್ನ  ತೀಕ್ಷಣವಾದ  ಅನಿಸಿಕೆಯನ್ನು  ಹಾಸ್ಯ ಮತ್ತು  ವ್ಯಂಗ್ಯ ಮಿಳಿತ  ಬರಹದಿಂದ   ಪ್ರಸ್ತುತ  ಪಡಿಸಿದ್ದಾಳೆ.  ಈ  ಕಾದಂಬರಿಯಲ್ಲಿ  ಬರುವ  ಸ್ತ್ರೀ  ಪಾತ್ರಗಳನ್ನು ವಿಭಿನ್ನ    ಮನಸ್ತತ್ವ   ಉಳ್ಳವರನ್ನಾಗಿ  ಬಹಳ  ಚೆನ್ನಾಗಿ  ಚಿತ್ರಿಸಿದ್ದಾಳೆ.
ಪುಸ್ತಕ  ಪ್ರಪಂಚದಲ್ಲಿ  ಒಂದು  ವೈಶಿಷ್ಟ್ಯ ವಾದ ಸ್ಥಾನ ಗಳಿಸಿದೆ  ಜೇನ್ ಆಸ್ಟೀನ್ ಕಾದಂಬರಿ  ' ಪ್ರೈಡ್ ಅಂಡ್ ಪ್ರೆಜುಡೀಸ್ '.
A  classic novel  by Jane Austine

 *ಬರಹ: ಸಂಧ್ಯಾ ಸಿದ್ಧವನಹಳ್ಳಿ* 

ಭಾವ ಸಂಗಮಕ್ಕಾಗಿ ಬರೆದುದು

End now Out of Office Settings

1 of 145



End now Out of Office Settings


1 of 145



End now Out of Office Settings



1 of 145

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...