ಭಾನುವಾರ, ಆಗಸ್ಟ್ 2, 2020

ಕ್ಷಮಾ ರಘುರಾಮ್ - ಓ ಜೊತೆಗಾರ



ಓ  ಜೊತೆಗಾರ....

ಮರೆತೆಯ ನೀನು ಓ ಜೊತೆಗಾರ
ಪ್ರೀತಿಯು ಬೆರೆತಾಗ
ನಾ ರಾಗದಿ ಹಾಡಿದೆ
ನಿನ್ನಯ ಜೊತೆಗೆ 
ಪ್ರೀತಿಯ ಅನುರಾಗ....!!

ಹಾಡಿದೆನು ನಾ  ಅಂದು
ನೆನಪಿದೆಯಾ ನಿನಗಿಂದು
ಮಧುರತೆಯ  ಗೀತೆಯನು
ಇಂಪಾದ  ಸ್ವರದಲ್ಲಿ...!!

ಸ್ಮರಿಸಿದೆನು ನಾ ಇಂದು
ಮಿಡಿಯುವುದು ಮನವಿಂದು
ಭವ್ಯತೆಯ ಗೀತೆಯನು
ನವಿರಾದ ಭಾವದಲ್ಲಿ...!!

ಕರೆದಿಹೆನು ಬಾ  ಎಂದು
ಬಾಡಿಹುದು ಮೊಗವಿಂದು
ವಿರಹತೆಯ  ಗೀತೆಯನು
ಬರಡಾದ  ಬಾಳಿನಲ್ಲಿ....!!

-- ಕ್ಷಮಾ ರಘುರಾಮ್ 

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...