ಮಂಗಳವಾರ, ಜುಲೈ 14, 2020


ಕಟ್ಟಿ ಬಿಚ್ಚಿ ಸುಟ್ಟ ನೆನಪುಗಳು

ಕನಸು ಖಾಲಿಯಾದ ಜೋಳಿಗೆಯಲ್ಲಿ 
ಕಿರಿಕಿರಿ ಎನುವ ನೆನಪಿಗೆ ಸರಗುಣಿಕೆ 
ಹಾಕಿ ಬೀಗಿದಿರುವೆ ಬಹಳಷ್ಟು,,.

ಇರುಳ ಕಹಿ ನೆನಪಿಗೆ ತರತರದಿ 
ತಂಬೂರಿ ಮೀಟಿ ಸಮಾಧಾನಿಸಿದೆ
ಕತ್ತಲ ಹಿತ್ತಲಲಿ ಬೇತಾಳವಾದವು ಬಹಳಷ್ಟು,,.

ಮಣ್ಣಲ್ಲಿ ಕಣ್ಣಂತೆ ಬಿಸಿಬಿಸಿ ಉಸಿರಾಗಿ ಹಸಿರಾದೆ 
ಇರುಳಲಿ ಕತ್ತಿ ಬೀಸಿ ಕತ್ತು ಮುರಿದು 
ಉಕ್ಕಿ ನಗೆ ಬೀರಿದವು ಬಹಳಷ್ಟು,,.

ಉಕ್ಕಿ ಬರುವ ಅಲೆಗೆ ಬಡಬಡ 
ಎದ್ದು ಎದೆಗೊಟ್ಟು ನಿಂತು ಬದುಕಿಸಿದೆ 
ನನ್ನೆ ಜಲಸಮಾಧಿ ಮಾಡಲಿಚ್ಛಿಸಿದವು ಬಹಳಷ್ಟು,,.

ತೂತಾದ ಅಂಗಿಗೆ ಹಸಿವಿನ ಬಿಸಿಬಿಸಿ 
ಅನ್ನ ತಿನಿಸಿದೆ,, ಉದರ ತುಂಬಿದ ಮೇಲೆ 
ಇದಿರಲ್ಲೆ ತಟ್ಟೆಯೊದ್ದವು ಬಹಳಷ್ಟು,,.

ಹರಿದ ಚಪ್ಪಲಿಗೆ ಚರಚರ ನನ್ನ ಚರ್ಮ 
ಕೊಯ್ದು ಎಕ್ಕಡ ಮಾಡಿ ತೋಡಿಸಿದೆ 
ತೊಟ್ಟು ಕಾಲಲೊದ್ದವು ಬಹಳಷ್ಟು,,.

ಕಣ್ಕಾಣದ ಕಣ್ಣಿಗೆ ನಿಗಿನಿಗಿ ಹೊಳೆವ 
ದೀವಿಗೆಯಾದೆ,,ನಿಗ ನೋಡಿ 
ತಳಕೆ ಅದುಮಿದ್ದವು ಬಹಳಷ್ಟು,,.

ಭಾವಗಳ ಸೊಗಡು ಬಗೆ ಬಗೆಯಲಿ 
ಹೇಳಿದೆ ಕಣ್ಕಟ್ಟಿನ ನಾಟಕವಾಡಿ 
ಎರಡು ಬಗೆದಿದ್ದವು ಬಹಳಷ್ಟು,,.

ಬೇಗುದಿಯ ಮರೆಮಾಚಿ ಸರಸರ 
ಸರಿದೋದೆ ಹೃದಯ ಸಾಗರದೊಳು 
ವಿಷ ಜಂತುವಾಗಿದ್ದವು ಬಹಳಷ್ಟು,.

ಎದೆಗುದಿಯ ಬದಿಗಿರಿಸಿ ಬಡಬಡಿಸಿ 
ದಾರಿದೀಪವಾದೆ ದೂರಸಾಗಿ 
ಕಲ್ಲುಮುಳ್ಳು ಎಸೆದಿದ್ದವು ಬಹಳಷ್ಟು,,.

ವಿವೇಕ ಕಳಚಿ ಬೀಗಿ ಸರಸರ 
ಭೂತವಾಗಿ ಜೋಳಿಗೆ ಬರಿದಾಗಿಸಿ 
ಕಳೆದೋದವು ಬಹಳಷ್ಟು,,.

ಬೆತ್ತಲಾದ ಬದುಕಿನಲಿ ಗಡಗಡ ನಡುಗಿ 
ಭೂತಗಳು ಮಕಾಡೆ ಮಲಗಿ 
ಬೆಂಕಿಯಲಿ ಬೇಯುತ್ತಿವೆ ಬಹಳಷ್ಟು,,.

ಖಾಲಿಯಾದ ಜೋಳಿಗೆ ವಿಧವಿಧ ಕನಸುಗಳ 
ಹುಟ್ಟಾಕಿಸಿದೆ ಜೋಳಿಗೆ ಭದ್ರ ಕಣ್ಣಲ್ಲಿ ಆರ್ದ್ರ 
ನವ ನೆನಪ ಕನಸುಗಳಿವೆ ಬಹಳಷ್ಟು,,.

ಕೋಟಿ ತೇಜ ಕನಸುಗಳು ಬುಸುಬುಸು 
ಗೂಡುತ್ತಿವೆ ಬಾಳು ಹುಣ್ಣಾಗಿ ಮೈಯೆಲ್ಲ 
ಕಣ್ಣಾಗಿ ನನಸ ಕೋಟೆ ಕಟ್ಟಲಿವೆ ಬಹಳಷ್ಟು.

                      ©✍️ವಾಣಿ ಭಂಡಾರಿ
Attachments area




ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...