ಮಂಗಳವಾರ, ಜುಲೈ 14, 2020

ನಾನೆಂದರೆ ನನ್ನ ಕವಿತೆಗಳಿಗೂ ಪ್ರೀತಿ

ನಾನೆಂದರೆ ನನ್ನ ಕವಿತೆಗಳಿಗೂ ಪ್ರೀತಿ

ನಾನೆಂದರೆ ನನ್ನ 
ಕವಿತೆಗಳಿಗೆ ಬಲು ಪ್ರೀತಿ
ಮುದ್ದೋ ಮುದ್ದು
ಎಲ್ಲಿಲ್ಲದ‌‌ ಕಕುಲಾತಿ

ಸುಮ್ಮನೆ ಕೂತರೂ ಸಾಕು
ಎದೆತುಂಬ ಭಾವ ಉಕ್ಕಿ
ಏನೆಲ್ಲ ಶಬ್ದಗಳು
ಓಲಾಡತೊಡಗುತ್ತವೆ

ಪ್ರೀತಿ ಪ್ರೇಮ ಅಂತಃಕರಣ
ಸ್ನೇಹ ಸೌಹಾರ್ದ
ಒಲವು ವಾತ್ಸಲ್ಯಗಳ ಸೆಲೆ
ಹರಿಯುತ್ತದೆ ಧಾರೆಯಾಗಿ.

ನಾ ಬರುವೆ ನಾ ಬರುವೆ
ಎನ್ನುತ್ತ ಒಂದೇ ಭಾವದ
ಹಲವು ಶಬ್ದಾಲಂಕಾರಗಳು
ಗಿರಕಿ ಹೊಡೆಯುತ್ತವೆ.

ಮನದ ಮಿಡಿತಗಳು
ಎದೆಯ ತುಡಿತಗಳು
ಒಲವ, ನೋವುಗಳು
ಕವಿತೆಗಳಾಗಿ ಸ್ಪಂದಿಸುತ್ತವೆ.

ಒಂಟಿತನದ ಕ್ಷಣಗಳನ್ನು
ತುಸು ಹಿತವಾಗಿಸುತ್ತ
ಬದುಕಿನ ಭಾರವನ್ನು
ಹಗುರಗೊಳಿಸುತ್ತವೆ.

ನನಗೂ ಕವಿತೆಗಳೆಂದರೆ
ಅನನ್ಯ ಅನುಭೂತಿ
ಅನುಕ್ಷಣವೂ ಜೊತೆಗಿರುವ
ಚೈತನ್ಯದ ಒರತಿ.

ನಾನೆಂದರೆ ನನ್ನ 
ಕವಿತೆಗಳಿಗೆ ಬಲು ಪ್ರೀತಿ
ಮುದ್ದೋ ಮುದ್ದು
ಎಲ್ಲಿಲ್ಲದ ಕಕುಲಾತಿ

-ರಾಜೇಂದ್ರ ಪಾಟೀಲ
Attachments area

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...