ಭಾನುವಾರ, ಆಗಸ್ಟ್ 2, 2020

- ಜೀವರಾಜ ಛತ್ರದ ಪ್ರಾರ್ಥನೆ

ಮಕ್ಕಳ ಕವನ

ಪ್ರಾರ್ಥನೆ

ಪ್ರಕೃತಿಯ ಗುಟ್ಟನು ತಿಳಿಯಲೆ ಬೇಕಿದೆ
ಬೇಕೆಂದಾಗ ಬಳಸಿ
ವರವನು ನೀಡಿರಿ ಮುಕ್ಕೋಟಿ ದೇವರೆ
ಬಯಸಿದ್ದೆಲ್ಲಾ ಹರಸಿ ೧

ಸುಡುಸುಡು ಸೂರ್ಯಗೆ ಬೆವರನು ತೊಳೆಯಲು 
ಮೋಡವ ಸುರಿಸಿ ಜಳಕ
ಗಡಗಡ ನಡುಗುವ ಮಾಗಿಯ ಚಳಿಯಲಿ
ಸೂರ್ಯನ ಶಾಖ ಪುಳಕ ೨

ವಾರಕ್ಕೊಮ್ಮೆ ಮಳೆಯನು ಸುರಿಸಿ
ಬೇಸಿಗೆಯಲ್ಲೂ ಹಸಿರು
ವರ್ಷದಪೂರ್ತಿ ಮಾವಿನ ಚಿಗುರಿಗೆ
ಕೋಗಿಲೆ ಕೊರಳಲಿ ಉಸಿರು ೩

ಹಣ್ಣಿನ ಮರದಲಿ ಎಲ್ಲಾ ಕಾಲಕು
ಬಯಸಿದ ಫಲಗಳು ದೊರೆತು
ನೆನೆದರೆ ಸಾಕು ಹೊಟ್ಟೆಯು ತುಂಬಿ
ಹಸಿವನು ಹಿಂಗಿಸಿ ಅರಿತು ೪

ಹರಿಯುವ ನದಿಗಳು ಹುಣ್ಣುಮೆ ದಿನಕೆ
ನಮ್ಮನೆ ಮುಂದೆ ಹರಿದು 
ಕತ್ತಲೆ ತುಂಬಿದ ಅಮವಾಸೆಯಲಿ
ಪೌರ್ಣಿಮೆ ಬೆಳಕನು ಸುರಿದು ೫

ಬೆನ್ನನು ತಟ್ಟಿ ಗುರುಗಳ ಹರಕೆಗೆ
ವಿದ್ಯೆಯು ದೊರೆಯಲಿ ಮತ್ತೆ 
ಸುಂದರ ಕತ್ತೆಯ ಮರಿಗಳು ಎಲ್ಲಾ 
ಬೆಳೆದಂತೆಲ್ಲಾ ಕತ್ತೆ ೬

- Hಜೀವರಾಜ ಛತ್ರದ
30.07.2020
Attachments area

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...