ಗುರುವಾರ, ಜುಲೈ 23, 2020

-ಮಧುರಾ ಮೂರ್ತಿ ಗಝಲ್

ಗಝಲ್

ಒಡೆದ ಕನ್ನಡಿಯಂತೆ ಕನಸುಗಳು
ಮುರಿಯದಿರಲಿ ಗೆಳತಿ
ನುಡಿದ ಮಾತುಗಳಿಂದ ಮನಸುಗಳು
ಉರಿಯದಿರಲಿ ಗೆಳತಿ

ಹೃದಯದ ಭಾವನೆ ಅರಿತು 
ನೋಟದಲಿ ತೆರೆಯದಿರು
ಎದೆಯ ನೋವುಗಳ ಎಣಿಸಿ ಒಲವು
ಸರಿಯದಿರಲಿ ಗೆಳತಿ

ಹೇಳಲಾಗದ ಯಾತನೆ ಘಾಸಿಮಾಡಿದೆ
ಮನವ ಸಂಘರ್ಷದಿ
ಬೆಳೆದಿರುವ‌ ಅನುಬಂಧದ ಬಳ್ಳಿ ಬೇರೆಡೆ
ಹರಿಯದಿರಲಿ ಗೆಳತಿ

ಹಣೆಗೆ ಬಳಿದ ಮಸಿಯನು ಒರೆಸುತ
ಕ್ಷಮಿಸೆಂದರೆ ಹೇಗೆ
ಹೆಣೆದ ಸುಂದರ ಸ್ವಪ್ನಗಳಿಗೆ ತಣ್ಣೀರು
ಸುರಿಯದಿರಲಿ ಗೆಳತಿ

ಜೀವನದ ಕಹಿ ಘಟನೆ ಕಸಿಯದಿರಲಿ
ಮಧುರಾಳ ಬಾಳನು
ಕವನದ ಚಿತ್ತವು ಸುಡುವ ಬೇಗೆಯಲಿ
ಇರಿಯದಿರಲಿ ಗೆಳತಿ

- ಮಧುರಾ ಮೂರ್ತಿ

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...