ಭಾವನೆಗಳ ತೆಕ್ಕೆಗೆ ತೆಗೆದುಕೊಳ್ಳುವ ಭಾವಗೀತಾ
ಇವಳು ಹೆಸರಿಗೆ ತಕ್ಕಂತೆ ಭಾವಗೀತೆಯೇ ಸರಿ. ಇವಳು ಕಣ್ಣಿಂದ ಮಾತಾಡುವಂತೆ ನಾಲಿಗೆಯಿಂದಲೂ ಜೋರಾಗಿ ಮಾತಾಡುತ್ತಾಳೆ. ಬಾಯಿ ಬಡುಕಿ. ತುಂಬಾ ಜೋರು. ಆದರೆ ಮನಸ್ಸು ಮಾತ್ರ ತುಂಬಾ ಸೂಕ್ಷ್ಮ. ರೇಶಿಮೆ ಎಳೆಗಿಂತ ಮೆತ್ತಗೆ. ಮುಟ್ಟಿದರೆ ಎಲ್ಲಿ ಸವೆದೇ ಹೋಗುತ್ತಾಳೋ ಎಂಬ ಆತಂಕ ಮೂಡಿಸುವ ಹೂಮನಸ್ಸು. ಆದರೆ ಸ್ವಲ್ಪ ಅಹಂ ಜಾಸ್ತಿ . ಸೋಲೋಪ್ಪುವಡೆ ಇಲ್ಲ. ತನ್ನದೇ ಖರೆ ಎನ್ನುವ ಅಹಂಭಾವ ಅವಳ ಮಾತಲ್ಲಿ, ನಡೆಯಲ್ಲಿ, ನುಡಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಬೆಳಗಾವಿಯ ಮಲೆನಾಡಿನ ಸೆರಗಿನಲ್ಲಿ ಮಾಳಮಾರುತಿಯ ಮಾರುದ್ದದ ಆಸುಪಾಸಿನಲ್ಲೇ ಇದ್ದರೂ ತನ್ನಷ್ಟಕ್ಕೆ ತಾನು ಮಹಾರಾಣಿಯಂತೆ ಭಾವಿಸಿ ಹಾಗೇ ವರ್ತಿಸುವ ಬಾಲೆ. ಕಾಲ್ಬೆರಳಿಗೆ ಬೆಳ್ಳಿಯುಂಗುರ ಇದ್ದರೂ ಅದರ ಹಂಗಿನಿಂದ ದೂರವೇ ಉಳಿದಾಕೆ. ನನಗೆ ತಂಗಿಯಾಗಿ, ಉತ್ತಮ ಗೆಳತಿಯಾಗಿ ಸಾಹಿತ್ಯದಲ್ಲಿ ಏನೆಲ್ಲಾ ಮಾಡಬೇಕೆಂಬ ಕನಸು ಹೊತ್ತಾಕೆ. ವೈದ್ಯಕೀಯ ಮಾಡದೇ ಇದ್ದರೂ ಡಾಕ್ಟರ್ ಆದಾಕೆ.
* ಉಮಾತನಯರಾಜ
ಹುಬ್ಬಳ್ಳಿ
೧೭.೦೯.೨೦೧೧
೯೫೯೧೩೨೩೪೫೩

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ