
ಮೌನವು ಕೂಡಾ ಸಾಕಷ್ಟು ಮಾತನಾಡುತ್ತದೆ. ಮೌನದಲ್ಲಿ ಅಡಗಿರುವ ಮಾತುಗಳು ಶಬ್ದಗಳಲ್ಲಿ ಸಿಗಲಿಕ್ಕಿಲ್ಲ. ಈಗೀಗ ನಮ್ಮ ಮಾತಿನ ಮಲ್ಲಿ ಮೌನಗೌರಿಯಾಗಿ , ಮಾತು ಬಿಟ್ಟಿದ್ದಾಳೆ. ಬೆಳಗಿನ ಜಾವ ನಾನು ಏಳುವುದಕ್ಕೂ ಮೊದಲೇ ಹಾಜರಿರುತ್ತಿದ್ದ ಸಂದೇಶಗಳು ಈಗ ನೆಲೆ ಕಳೆದುಕೊಂಡಿವೆ. ಅವಳಿಗೆ ಮೊದಲೇ ಹೇಳಿದ್ದೆ, ನೀನು ಯಾವುದೇ ಕ್ಷಣ ನನ್ನಿಂದ ದಿಟ್ಯಾಚ್ ಮೆಂಟ್ ಆದರೂ ನನ್ನ ಭಾವನೆಗಳಲ್ಲಿ, ಮನದ ಮಾತುಗಳಲ್ಲಿ ಯಾವ ಬದಲಾವಣೆಯು ಆಗುವುದಿಲ್ಲ ಎಂದು. ಬೇರೆ ಫ್ರೆಂಡ್ಸ್ ಮಾಡಿಕೊಳ್ಳಿ ಒಂಟಿತನ ದೂರವಾಗುತ್ತೆ ಅನ್ನುತ್ತಲೇ ಇದ್ದಳು. ಅವಳ ಮಾತಿನ ಅಂತರಂಗ ನನಗೆ ಅರ್ಥವಾಗಿತ್ತು. ಮೌನಗೌರಿ ತನ್ನ ಟ್ರ್ಯಾಕ್ ಬದಲಿಸುತ್ತಿದ್ದಾಳೆ ಅಂತ. ಅವಳು ತನ್ನ ಟ್ರ್ಯಾಕ್ ಬದಲಿಸಿದರೂ ನಾನು ನನ್ನ ಟ್ರ್ಯಾಕ್ ಬದಲಿಸಲಾರೆ, ಬದಲಿಸಲಾಗದು. ಪ್ರೀತಿಯಿಂದ ಹೇಳಿದರೆ ಇವರು ಬದಲಾಗಲಾರರು ಅನ್ನಿಸ್ತೆನೋ ಅವಳಿಗೆ . ನನ್ನ ತಲೆ ಮೇಲೊಂದು ಸಣ್ಣ ಗೂಬೆ ಕೂರಿಸಿ ಈಗ ಮೌನಿಯಾಗಿದ್ದಾಳೆ. ಇದರ ಅರ್ಥ ನಾನೇ ನಾನಾಗಿ ದೂರ ಅಗಲಿ ಎಂಬುದು ಅವಳ ಅವಳ ತರ್ಕವಾದಿತೇನೋ. ಅಂದಿಗೂ, ಇಂದಿಗೂ ಮುಂದೆ ಎಂದೆಂದಿಗೂ ಅವಳ ಕುರಿತಾಗಿ ನನ್ನ ಮೃದು ಭಾವನೆಗಳಿಗೆ ಧಕ್ಕೆಯಾಗಲಾರದು. ಯಾಕೆಂದರೆ ಅವಳು ನನ್ನ ಅಂತರಂಗದ ಗೆಳತಿ, ಪ್ರೀತಿಯ ತಂಗಿ, ಮಮತೆಯ ಮಗಳು, ವಾತ್ಸಲ್ಯಮಯಿ ಅಮ್ಮನಂತೆ. ಮೌನಗೌರಿ , ನೀನು ಎಲ್ಲೇ ಇರು, ಹಾಯಾಗಿರು, ಸುಖವಾಗಿರು. ನಿನ್ನ ಗೂಡಿನಲ್ಲಿ ಶಾಂತಿ ಪ್ರೀತಿ ನೆಲೆಸಿರಲಿ. ಕುಚ್ ಪಾನೆ ಕೆ ಲಿಯೇ ಕುಚ್ಹ್ ಖೋನಾ ಪಡತಾ ಹೈ. . ಹೈನಾ ?.........ಜಗತ್ತಿನ ಪ್ರಬಲ ಭಾಷೆ ಮೌನ .
* ಉಮಾತನಯರಾಜ
ಹುಬ್ಬಳ್ಳಿ- ಕಲಬುರ್ಗಿ
೦೯.೦೧.೨೦೧೧
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ