ಗೆಳತಿ,
ನೀನು ನಕ್ಕರೆ
ಸಾವಿರ ಸಾವಿರ
ನೈದಿಲೆಗಳು ಏಕ ಕಾಲಕ್ಕೆ
ಅರಳುತ್ತವೆ
ಕೆಂದಾವರೆಗಳು
ನಾಚಿಕೊಳ್ಳುತ್ತವೆ ;
ಅರಳಿ ಬಿರಿದ ಮಲ್ಲಿಗೆಗಳು
ಮತ್ತೆ ಮೊಗ್ಗಾಗುತ್ತವೆ
ಚಲುವಿನ ಚಿತ್ತಾರಗಳೂ
ಬಣ್ಣ ಕಳೆದುಕೊಳ್ಳುತ್ತವೆ
ನಿನ್ನ ನಿರ್ಮಾಪಕ ನಿರ್ದೇಶಕ
ಬ್ರಹ್ಮನೂ ಮೂಕವಿಸ್ಮಿತನಾಗಿ
ಬಾಯಿ ಮೇಲೆ
ಬೆರಳಿಟ್ಟುಕೊಳ್ಳುತ್ತಾನೆ
* ಉಮಾತನಯರಾಜ
ಹುಬ್ಬಳ್ಳಿ-ಕಲಬುರ್ಗಿ ರಾತ್ರಿ ೧೧-೫೦ ೦೯-೧೨-೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ