ಕರ್ನಾಟಕದ ಖ್ಯಾತ ಕನ್ನಡ ವಾರ ಪತ್ರಿಕೆ ಕರ್ಮವೀರ ದಲ್ಲಿ ದಿನಾಂಕ ೧೪.೧೧.೨೦೧೦ ರ ಅ ಸಂಚಿಕೆಯಲ್ಲಿ ನನ್ನ ಕವಿತೆ " ನಿನ್ನ ನೆನಪು " ಪ್ರಕಟವಾಯಿತು. ಆ ಸಂಚಿಕೆ ನನಗೆ ತಕ್ಷಣ ಸಿಗಲಿಲ್ಲ. ಅದು ಪ್ರಕಟವಾಗಿದೆ ಅಂತ ಗೊತ್ತಾಗಿದ್ದೆ ೧೯.೧೧.೨೦೧೦ ರಂದು ಕಳಬುರ್ಗಿಗೆ ಹೋದ ಸಂದರ್ಭದಲ್ಲಿ. ಅಪ್ಪ ಹೇಳಿದ್ರು. ಹುಬ್ಬಳ್ಳಿಗೆ ಬಂದು ಕಚೇರಿಯಲ್ಲೂ ಕೇಳಿದೆ. ಅಲ್ಲೂ ಮುಗಿದಿತ್ತು. ಕಡೆಗೆ ನನ್ನ ಕೆಲವರು ಆಪತ್ಬಾಮ್ಧವರಲ್ಲಿ ಒಬ್ಬರಾದ ಕೃಷ್ಣಾ ಶಾಂತಗಿರಿ ಅವರಲ್ಲಿ ಕೇಳಿದೆ. ಮನೇಲಿ ಇದೆ ತರ್ತೀನಿ ಅಂದ್ರು. ಮರುದಿನ ಡಿ ೫ ಅಥವಾ ೬ ರಂದು ತಂದು ಕೊಟ್ರು. ಶಾಂತಗಿರಿ ,ತುಂಬಾ ಥ್ಯಾಂಕ್ಸ್ .ಸಹೋದ್ಯೋಗಿಗಳಾದ ತನುಜಾ, ಕೃಷ್ಣಮೂರ್ತಿ, ನಾಗಸುಬ್ಬು, ಎಲ್ಲಾ ಓದಿದರು. ನಕಲು ಜೆರಾಕ್ಸ್ ಪ್ರತಿಯನ್ನು ಇಲ್ಲಿ ಪ್ರಕಟಿಸಿದ್ದೇನೆ. ನೀವೂ ಓದಿ. ಕಾಮೆಂಟ್ ಮಾಡಿ.
* ಉಮಾತನಯರಾಜ
( ರಾಜೇಂದ್ರ ಪಾಟೀಲ್ )
ಹುಬ್ಬಳ್ಳಿ ಮತ್ತು ಕಲಬುರ್ಗಿ
೦೯.೧೨.೨೦೧೦
೦೮.೪೦ ಮುಂಜಾನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ