ಬುಧವಾರ, ಆಗಸ್ಟ್ 4, 2010

ನಿನ್ನ ನೆನಪು


ಮುಂಜಾವಿನ
ಮಂಜಿನ ಮೇಲಿಂದ
ತೇಲಿ ಬರುವ ತಿಳಿಗಾಳಿಯಲ್ಲಿ
ನಿನ್ನ ನೆನಪು

ನೀಲಿ ಆಕಾಶದಲ್ಲಿ
ತೇಲಾಡುತ್ತ
ಸಂಭ್ರಮಿಸುವ
ಮೋಡಗಳ ಒಡಲ ತುಂಬೆಲ್ಲ
ನಿನ್ನ ನೆನಪು

ಫಲವತ್ತತೆಗೊಂಡ
ಮೋಡಗಳ ತೆಕ್ಕೆಯಿಂದ
ಬಿಡಿಸಿಕೊಂಡು ಭುವಿಗೆ ದಾಂಗುಡಿಯಿಡುವ
ಹನಿ ಹನಿ ಮುತ್ತಿನ ಬಿಂದುಗಳಲ್ಲಿ
ನಿನ್ನ ನೆನಪು;

ನೀರ ಮುತ್ತಿನ ಹನಿಗಳ
ಸ್ಪರ್ಶ ಸುಖದಿಂದ
ಭೂತಾಯಿ ಒಡಲಲ್ಲಿ
ಪಲ್ಲವಿಸುತ್ತ ಹೋಗುವ
ಬೀಜ ಬೀಜಗಳಲ್ಲಿ
ನಿನ್ನ ನೆನಪು

ಓಲಾಡುವ ಸಸಿಗಳಲ್ಲಿ,
ತೊನೆದಾಡುವ ಬೆಳೆಗಳಲ್ಲಿ,
ಭ್ರಂಗದ ಸಂಗೀತದಲ್ಲಿ
ನಿನ್ನ ನೆನಪು

ಚಿಟ್ಟೆಗಳ ಚಂಚಲತೆಯಲ್ಲಿ
ತರುಳತೆಗಳಲ್ಲಿ, ಹೂಗಿಡಗಳಲ್ಲಿ
ಹೂಗಂಧ ಸೂಸಿ ಬರುವ
ಗಾಳಿಯಲ್ಲಿ,
ಬದುಕಿಗೆ ಮುನ್ನುಡಿ ಬರೆಯುವ,
ವಿದಾಯ ಹೇಳುವ ಬೆಂಕಿಯ ನಾಲಿಗೆಯಲ್ಲಿ
ನಿನ್ನ ನೆನಪು

ಬಯಲುದಾರಿಯಲ್ಲಿ, ಬಾನಂಚಿನಲ್ಲಿ
ದಿಗಂತದ ವಿಸ್ಮಯದಲ್ಲಿ
ನೋವು ನಲಿವು, ಏಳು ಬೀಳು
ಸುಖ ದುಖಗಳಲ್ಲಿ
ಅಳಿಸಲಾಗದ ಶಾಸನ
ನಿನ್ನ ನೆನಪು

* ಉಮಾತನಯರಾಜ
ಹುಬ್ಬಳ್ಳಿ
೧೦-೦೭-೨೦೧೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...