ಬುಧವಾರ, ಜೂನ್ 2, 2010

ಇವಳು ಕಾವ್ಯ ಕನ್ನಿಕೆ, ಕುಂದಾ





ಇವಳು ಕಾವ್ಯ ಕನ್ನಿಕೆ
ಮನಸ್ಸು
ಕ್ಷೀರ ಸಾಗರ

ಎದೆಯಲ್ಲಿ ಪ್ರೀತಿಯ ಕಡಲು ಉಕ್ಕಿ ಹರಿಯುವ ವಾತ್ಸಲ್ಯದ ಒಡಲು ಕಣ್ಣ ಮುಂದಿರುವಾಗ ಕಾಮನ ಬಿಲ್ಲು ಕಣ್ಣಳತೆಯಿಂದ ದೂರವಾದಾಗಲೂ ಹ್ರದಯದಿಂದ ಹ್ರದಯಕ್ಕೆ ನಿತ್ಯ ನಿರಂತರ ಸಂದೇಶಗಳ ಸುರಿಮಳೆ ನಿತ್ಯ ಜಂಜಡದಿಂದ ಸೋತು ಸುಣ್ಣವಾಗಿ ಬಂದಾಗ ಮೈ ಮನಗಳ ತಣಿಸುತ್ತಾಳೆ.
ಕಷ್ಟ ನಷ್ಟಗಳು ಎದುರಾದಾಗ ಜೊತೆ ಜೊತೆಯಲ್ಲೇ ಕೈಗೆ ಕೈ ಹಿಡಿದು ಮುನ್ನಡಿಯಿತ್ತು ಸಾಗುತ್ತಾಳೆ ; ದಾರಿಯ ಕಷ್ಟ ಅರಿವಿಗೆ ಬಾರದ ಹಾಗೆ ನಲ್ಮೆಯ ಮಾತಾಡುತ್ತ ನನ್ನಲ್ಲಿ ಗೆಲುವು ಹುರುಪು ಹುಮ್ಮಸ್ಸು ತುಂಬುತ್ತಾಳೆ. ಹಗಲು ಸವೆದು, ರಾತ್ರಿ ನಿದ್ದೆಗೆಟ್ಟು ಬಳಲಿ ಬೆಂಡಾಗುವ ನನ್ನ ಕಣ್ಣುಗಳಲ್ಲಿ ಹೊಸ ಚೈತನ್ಯ ತುಂಬುತ್ತಾಳೆ. ನನ್ನ ಬಾಳ ಆಗಸದಲ್ಲಿ ಸದಾ ಬೆಳಕು ಚೆಲ್ಲುವ ಚಲುವ ಚಂದ್ರಿಕೆಯಾಗುತ್ತಾಳೆ. ಅರಳಿ ಘಮಘಮಿಸುವ ಹೂವಾಗುತ್ತಾಳೆ, ನಾನು ದುಂಬಿಯಾಗುತ್ತೇನೆ.
* ಉಮಾತನಯರಾಜ, ಹುಬ್ಬಳ್ಳಿ, ೦೩-೦೬-೨೦೧೦ ಮುಂಜಾನೆಯ ೦೯.೦೦ ಗಂಟೆ



ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...