ಬುಧವಾರ, ಜೂನ್ 2, 2010

ಗೆಳತಿ ಮಾತಾಡುತ್ತಿಲ್ಲ


ನನ್ನ ಪ್ರೀತಿಯ ಹುಡುಗಿ
ಅದೇಕೋ ಮಾತಾಡುತ್ತಿಲ್ಲ
ಮೌನದ ಚಿಪ್ಪಿನಲ್ಲಿ
ಮಹಾಮೌನಿಯಾಗಿದ್ದಾಳೆ.
ಇಂದಲ್ಲ ನಾಳೆ ಮಾತಾಡಲಿ
ಮಾತಾಡುತ್ತಾಳೆ
ಅವಳ ಸ್ನೇಹ ಶುದ್ದ್ಧವಾಗಿದ್ದರೆ,
ಪ್ರೀತಿ ನಿಷ್ಕಲ್ಮಶವಾಗಿದ್ದರೆ
ಖಂಡಿತ ಮೌನದ ಗುಹೆಯಿಂದ
ಹೊರಬರುತ್ತಾಳೆ.
ನಾನು ಆ ಗುಹೆಯ ಹೊರಗೆ
ಮೊಗ್ಗಿನ ಮಲ್ಲಿಗೆ ಹಿಡಿದುಕೊಂಡು
ಕಾಯುತ್ತಲೇ ಇರುತ್ತೇನೆ
ಕ್ಷಣ, ನಿಮಿಷ, ತಾಸು, ದಿನ, ವಾರ
ತಿಂಗಳು, ವರುಷ,
ನನ್ನ ದೇಹದಲ್ಲಿ ಉಸಿರಿರುವತನಕ
ಕಾಯುತ್ತಲೇ ಇರುತ್ತೇನೆ
* ಉಮಾತನಯರಾಜ
ಹುಬ್ಬಳ್ಳಿ
೦೩-೦೬.೨೦೧೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...