ನನಗೆ ಪೂರ್ತಿ ನೆನೆಪಿದೆ
೧೯೮೮-೮೯ ಇರಬಹುದು, ಅದೇ ತಾನೇ ಪರಿಚಯವಾಗಿದ್ದ ಗೆಳೆಯ ನಾಗತಿಹಳ್ಳಿ ಚಂದ್ರಶೇಖರ ಅವರು ನಾವೆಲ್ಲಾ ಗೆಳೆಯರ ಬಳಗದಿಂದ ಹೊರತಂದಿದ್ದ ನಮ್ಮ ಕಥಾಸೌಗಂಧ ಕಥಾ ಸಂಕಲನವನ್ನು ಬಿಡುಗಡೆ ಮಾಡೋದಕ್ಕೆ ಅಂತ ನಾವಿದ್ದ ಕಾಲಬುರ್ಗಿಗೆ ಬಂದಿದ್ದರು. ಡಾ. ಹಾ.ಮಾ.ನಾಯಕರು ಅಧ್ಯಕ್ಷತೆ ವಹಿಸಿದ್ದರು.
ನಾಗತಿಹಳ್ಳಿಯವರು ತಮ್ಮೊಂದಿಗೆ ನನ್ನ ಪ್ರೀತಿಯ ಹುಡುಗಿಗೆ ಪುಸ್ತಕ ತಂದಿದ್ದರು. ಅದರಲ್ಲಿ ಒಂದು ಕಡೆ ಬರೆದಿದ್ದರು, ನಾವುಯಾರನ್ನಾದರು ತುಂಬಾ ಪ್ರೀತಿಸುತ್ತಿದ್ದೇವೆ ಎಂದರೆ ನಾವು ಮಾನಸಿಕವಾಗಿ ಅವರ ಗುಲಾಮರಾಗುತ್ತಿದ್ದೇವೆ ಎಂದೇ ಅರ್ಥ. ನಮ್ಮಿಂದ ಪ್ರೀತಿಸಲ್ಪಡುವ ವ್ಯಕ್ತಿ ಮಾತ್ರ ನಿಧಾನವಾಗಿ ಅಹಂಕಾರದ ಮೊಟ್ಟೆಯಾಗಿ ನಮ್ಮನ್ನು ಅಲಕ್ಷ ಮಾಡುತ್ತಾ ಸಾಗುತ್ತದೆ ಎಂದು. ಪ್ರೀತಿ ಮತ್ತು ಸ್ನೇಹದಲ್ಲಿ ಅಹಂಕಾರ, ಹಮ್ಮು, ಬಿಮ್ಮುಗಳು ಸೇರಿದರೆ ಆ ಸ್ನೇಹ, ಆ ಪ್ರೀತಿ ಮಲಿನಗೊಳ್ಳುತ್ತದೆ. ಮಲಿನಗೊಂಡ ಸ್ನೇಹದಲ್ಲಿ ಪ್ರೀತಿಯ್ ಮಲ್ಲಿಗೆ ಅರಳುವುದಿಲ್ಲ. ಪ್ರೀತಿಯ ಮಲ್ಲಿಗೆ ಅರಳದಿದ್ದರೆ ಆ ಸ್ನೇಹಕ್ಕೆ ಅರ್ಥವಿರುವುದಿಲ್ಲ. ಅರ್ಥವಿಲ್ಲದ ಸ್ನೇಹ ಬೇಕಾ?
* ಉಮಾತನಯರಾಜ ೯೫೯೧೩೨೩೪೫೩, ೯೨೪೨೮೪೭೪೬೮
ರಾಜೇಂದ್ರ ಪಾಟೀಲ
ಹುಬ್ಬಳ್ಳಿ
೦೩.೦೬.೨೦೧೦ ಬೆಳಗಿನ ೦೭.೪೫

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ