ಬುಧವಾರ, ಜೂನ್ 9, 2010

ನೀನಿಲ್ಲದ ದಿನ



ಗೆಳತಿ
ನೀನಿಲ್ಲದ ,
ನಿನ್ನ ನುಡಿಗಳಿಲ್ಲದ
ದಿನವೂ ಹೇಗಿರುತ್ತದೆ
ಎಂಬ ಕಲ್ಪನೆ ನನಗಿರಲಿಲ್ಲ.
ನೀನಿಲ್ಲದ ನನಗೆ ಪ್ರಪಂಚವೇ
ಇಲ್ಲ ಎಂದುಕೊಂಡಿದ್ದೆ.
ಅರೆ, ಇದೇನಿದು ? ಸೂರ್ಯ !ಎಂದಿನಂತೆ ಬಂದಿದ್ದಾನೆ
ಸರಿಯಾಗಿ, ಗಾಳಿ ಬೀಸುತ್ತಿದೆ , ಗುಡುಗು ಮಿಂಚು, ಮಳೆ ಶುರುವಾಗಿದೆ ಹಿತವಾಗಿ, ಹಾಲಿನವನೂ ಬಂದಿದ್ದಾನೆ, ರಸ್ತೆಗಳುಜೀವಂತವಾಗಿವೆ ವಾಹನಗಳ ಓಡಾಟ ಶುರುವಾಗಿದೆ; ತರಕಾರಿ ಮಾರುಕಟ್ಟೆ ಗಿಜಿಗುಟ್ಟುತ್ತಿದೆ; ಬದುಕಿಗಾಗಿ ಜೀವನದ ಹೋರಾಟಶುರುವಿಟ್ಟುಕೊಂಡಿದೆ. ಶಾಲೆ ಕಾಲೇಜು, ಕಛೇರಿಗಳು, ಅಂಗಡಿಗಳು, ಗುಡಿ ಗುಂಡಾರಗಳು ಏರು ಪೇರಿಲ್ಲದೆ ಕಾಣುತ್ತಿದೆ. ನೀನೆ ಎಲ್ಲ, ನೀನಿಲ್ಲದೆ ಏನೂ ಇಲ್ಲ ಎಂದುಕೊಂಡಿದ್ದೆ; ನೀನಿಲ್ಲದೆಯೂ ಇಷ್ಟೆಲ್ಲಾ ಇದೆ ? ಭ್ರ್ರಮೆಗೂ ವಾಸ್ತವಕ್ಕೂ ಎಷ್ಟೊಂದುವ್ಯತ್ಯಾಸ ? ಹಾಗಾದರೆ ನೀನಿಲ್ಲದೆಯೂ ನನಗೆ ಜೀವನವಿದೆ? ನೀನಿಲ್ಲದೆಯೂ ನನಗೆ ಜೀವನವಿದೆ ಎಂದಾದರೆ ನಾವು ಕಟ್ಟಿಕೊಂಡ ಕನಸುಗಳಿಗೆಅರ್ಥವೆಲ್ಲಿದೆ? ಪ್ರೀತಿಗೆಲ್ಲಿದೆ ಜಾಗ? ಸ್ನೇಹ ಪ್ರೀತಿಯೂ ಕಮರ್ಷಿಯಲ್ ಆಗಿ ಹೋಯ್ತಾ ? ಬೇಕಾದಾಗ ಮಾತ್ರ ಇಟ್ಟುಕೊಂಡುಬೇಡವಾದಾಗ ಮರೆತು ಬಿಡೋದು!


* ಉಮಾತನಯರಾಜ,
( ರಾಜೇಂದ್ರ ಪಾಟೀಲ ) ,
ಹುಬ್ಬಳ್ಳಿ ೧೦.೦೬.೨೦೧೦ , 9591323453

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...