
ಬೀಳಲಿಲ್ಲ ಕನಸುಗಳು
ನಿನ್ನ ಆಶಯದಂತೆ
ನನಗೆ ಕನಸುಗಳೇ
ಬೀಳಲಿಲ್ಲ;
ಏಕೆಂದರೆ ನಿನ್ನ ನೆನಪಲ್ಲಿ
ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ.
******
ನಿರೀಕ್ಷೆ
ಕಾಯುತ್ತಿದ್ದೇನೆ
ನಾನು ನಿನಗಾಗಿ,
ನಿನ್ನ ಸಂದೇಶಕ್ಕಾಗಿ
ನಿನ್ನ ಒಲವಿನ ಸ್ಪರ್ಶಕ್ಕಾಗಿ
ಒಂದೇ ಒಂದು ಸಿಹಿ ಸಿಂಚನಕ್ಕಾಗಿ.
******
ಬೆಳಗೇ ಇಲ್ಲ
ಗೆಳತಿ,

ನಿನ್ನ ಸಂದೇಶವಿಲ್ಲದ
ನನಗೆ ಬೆಳಗೇ ಇಲ್ಲ,
ರಾತ್ಫ್ರಿಗೆ ಅರ್ಥವೇ ಇಲ್ಲ,
ನಿನ್ನ ಪ್ರೀತಿಯ
ಸಿಂಚನವಿಲ್ಲದೆ ನನಗೆ
ಬದುಕೇ ಇಲ್ಲ;
ಏಕೆಂದರೆ ನನಗೆ ನೀನೆ ಎಲ್ಲ.
* ರಾಜೇಂದ್ರ ಪಾಟೀಲ್
( ಉಮಾತನಯರಾಜ)
ಹುಬ್ಬಳ್ಳಿ
೦೨.೦೬.೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ