ಮಂಗಳವಾರ, ಜೂನ್ 1, 2010

ಕುಂದಾ - ಗಿರ್ಮಿಟ್ ಮುಖಾ ಮುಖಿ

ಮುಂಜಾನೆಯಷ್ಟೇ ಕುಂದಾ ಸಂದೇಶ ಪಡೆದಿದ್ದ ಗಿರ್ಮಿಟ್ ಗೆ ಅದೇನೋ ಖುಷಿ. ಯಾಕೋ ಏನೋ ಕುಂದಾನ್ನ ಭೇಟಿ ಮಾಡಲುತವಕಿಸುತ್ತಿದ್ದ ಗಿರ್ಮಿಟ್ ಗೆ ಕುಂದಾ ಕಡೆಯಿಂದ ಇನ್ನೊಂದು ಸಂದೇಶ. ನಾನು ನಿಮ್ಮ ಕಡೆ ಬರ್ತಾ ಇದ್ದೇನೆ ಅಂತ. ನಿಮ್ಮ ಕಡೆಅಂದ್ರೆ ಎಲ್ಲಿ? ಗಿರ್ಮಿಟ್ ಪ್ರಶ್ನೆ. ಕಾರ್ಪೋರೇಶನ್ ಕಡೆ , ಕುಂದಾ ಉತ್ತರ.
ಗಿರ್ಮಿಟ್ ಎದೆಯಲ್ಲಿ ಏನೋ ಕಂಪನ. ನಗಾರಿ ಬಾರಿಸಿದ ಹಾಗೆ. ಸರಿ ಅಂತ ಗಿರ್ಮಿಟ್ ಸಿದ್ಧವಾಗಿದ್ದು ಕೇವಲ ೧೦ ನಿಮಿಷದಲ್ಲಿ. ಆಟೋ ಇಳಿದುಕೊಂಡು ಕುಂದಾನ್ನ ಹುಡುಕಲು ಗಿರ್ಮಿಟ್ ಶ್ರಮ ಪಡಬೇಕಾಗಿರಲಿಲ್ಲ . ಕಲ್ಪನೆಯ ಜಾಗದಲ್ಲಿಯೇ ಕುಂದಾನಗುತ್ತಿತ್ತು. ಅದೇ ಮುಗುಳುನಗೆ ಚೆಲ್ಲಿದ ಕುಂದಾ ಜೊತೆ ಹರಟಲು ಜಾಗೆಯ ಅವಶ್ಯಕತೆ ಇತ್ತು. ಕೃಷ್ಣನಲ್ಲಿ ಜಾಗ ಇರಲಿಲ್ಲ. ಸ್ವಾತಿಯನ್ನು ಅರಸಿಕೊಂಡು ಹೋದಾಗ ಜಾಗೆಯನ್ನು ಆರಿಸಿದ್ದು ಕುಂದಾನೆ. ಕುಂದಾ ಅಭಿರುಚಿಗೆ ಖುಷಿಯಾಯಿತು.
ಗಿರ್ಮಿಟ್ ಎದುರಿಗೆ ಕುಂದಾ. ಇದು ಕನಸಾ ? ನಿಜಾನಾ ? ಗಿರ್ಮಿಟ್ ಎದೆಯಲ್ಲಿ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಧಿಮಿಗುಡುತ್ತಾಓಡುತ್ತಿತ್ತು.
ಕಣ್ಣೆದುರಲ್ಲಿ ಕಾವ್ಯ ಕನ್ನಿಕೆ. ಗಿರ್ಮಿಟ್ ಗೆ ಏನೇನೋ ಹೇಳುವ ತವಕ . ಅವ್ಯಕ್ತ ಖುಷಿ. ಅಭಿವ್ಯಕ್ತಿಗೊಳಿಸಲಾಗದ ಆನಂದ. ಮಾಣಿಬಂದಾಗ ರವೆ ಇಡ್ಲಿಗೆ ಆದೇಶ ಕೊಟ್ಟು ಮಾತಿಗೆ ಇಳಿದಾಗ ಸಪ್ತಸಾಗರ ದಾಟಿ ಬಂದ ಅನುಭವ. ಇದೇನು ಅನುಭವ ? ಪ್ರೀತೀನಸ್ನೇಹಾನಾ ? ಇದು ಯಾವ ಬಂಧ? ಬಂಧನಕ್ಕೆ ಯಾವ ಅರ್ಥ ? ತಿಳಿಯದೆ ತೊಳಲಾಡಿದ ಗಿರ್ಮಿಟ್ ಅಂತಿಮಕ್ಕೆಬರಲಾಗಲಿಲ್ಲ. ತಿನ್ನುವುದು ಮುಗಿದರೂ ಏಳುವ ಮನಸ್ಸಿರಲಿಲ್ಲ. ಕುಂದಾ ಕಣ್ಣುಗಳಲ್ಲಿ ಹೊಳಪಿತ್ತು. ಕೆನ್ನೆಯಲ್ಲಿ ಸೊಬಗಿತ್ತು. ಆದರೆಗಡಿಯಾರ ಸೂಕ್ಷ್ಮವಾಗಿ ಸೂಚನೆ ಕೊಡುತ್ತಿತ್ತು. ಎದ್ದಾಗ ಎದೆ ಭಾರವಾಗಿತ್ತು. ಕುಂದಾ ಮನಸ್ಸಿನಲ್ಲಿ ಅದೇನಿತ್ತೋ ?
ಕುಂದಾ ಕಣ್ಣುಗಳಲ್ಲಿ ಸಾವಿರ ಸಾವಿರ ಭಾವನೆಗಳಿದ್ದವು. ಅವನ್ನೆಲ್ಲಾ ಓದುವ ಆಸೆ ಗಿರ್ಮಿಟ್ ಗೆ . ಮಾತಾಡುತ್ತಲೇ ಸ್ವಾತಿಯಿಂದಹೊರಬಂದು ರಸ್ತೆಗಿಳಿದಾಗ ಎದೆಯಲ್ಲಿ ಏನೇನೋ ತಳಮಳ. ಕುಂದಾ ಭೇಟಿ ಇನ್ನೆಂದೋ ಎಂಬ ಲೆಕ್ಕಾಚಾರ ಗಿರ್ಮಿಟ್ ನಲ್ಲಿ.
ಇದು ದಿ ಎಂಡಾ ಅಥವಾ ಸ್ಟಾರ್ಟ ಎಂದ ಗಿರ್ಮಿಟ್ ಗೆ ಕುಂದಾ ಹೇಳಿದ್ದು. ಇದು ಇನ್ನೊಂದು ಸ್ಟಾರ್ಟ್ ಅಂತ.
ಕುಂದಾಗೆ ಬಾಯ್ ಅಂದರೂ ಮನಸ್ಸು ಬಾಯ್ ಅಂದಿರಲಿಲ್ಲ. ಕೊಪ್ಪಿಕರ್ ರಸ್ತೆಯ ಇಳಿಜಾರಿನಲ್ಲಿಯೂ ಎದೆ ಮಾತ್ರ ಭಾರವಾಗಿತ್ತು. ಮತ್ತೆ ರಾತ್ರಿ ತನಕ ಸಂದೇಶಗಳ ರವಾನೆ. ಜಂಗಮವಾಣಿಯಲ್ಲಿ ಮಾತಾಡಿದಷ್ಟು ಬೇಸರವಿಲ್ಲ. ಬ್ಲಾಗ್ನಲ್ಲಿ ಎದೆಯ ಭಾರಇಳಿಸುವಾಗಲೇ ಕುಂದಾ ಸಂದೇಶ. ಪ್ರತಿ ಸಂದೇಶ ಕಳಿಸಿದ ಗಿರ್ಮಿಟ್ ಬ್ಲಾಗ್ನಲ್ಲಿ ಕುಂದಾ ಕುರಿತಾಗಿ ಪುಟ್ಟ ಕಾವ್ಯವನ್ನೇ ಬರೆದುಮುಗಿಸಿದಾಗ ಗಡಿಯಾರದಲ್ಲಿ ಸರಿಯಾಗಿ ೧೧.೪೫ ಕುಂದಾ - ಗಿರ್ಮಿಟ್ ಮುಖಾ ಮುಖಿ ಓದುಗರಿಗೆ ಕಾವ್ಯಾನೂಭೂತಿನೀಡಿದರೆ ಅದೇ ಯಶಸ್ಸು. ಶುಭರಾತ್ರಿ ಕುಂದಾ.

ಪ್ರೀತಿಯಿಂದ
ಗಿರ್ಮಿಟ್

೦೧.೦೬.೨೦೧೦

* ರಾಜೇಂದ್ರ ಪಾಟೀಲ
ಹುಬ್ಬಳ್ಳಿ
?

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...