ಮಿರಗಿ ಇದು ನನ್ನ ಹಳ್ಳಿ. ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. ಮೊನ್ನೆ ದಿನಾಂಕ ೨೩ ಮತ್ತು ೨೪ ಕ್ಕೆ ಅಲ್ಲಿದ್ದೆ. ನನ್ನ ಕಾರು ೨೩ ರ ಮುಂಜಾನೆ ೮.೧೫ ಕ್ಕೆ ಹುಬ್ಬಳ್ಳಿಯಿಂದ ಹೊರಟಿತ್ತು. ೧೨.೩೦ ಕ್ಕೆ ವಿಜಾಪುರದಲ್ಲಿದ್ದೆ. ಮತ್ತೊಂದು ಬಾರಿ ಗೋಲಗುಂಬಜ್ ಹತ್ತಿದ್ದೆ. ವ್ಹಿಸ್ಪರಿಂಗ್ ಟಾವರ್ ತಲುಪಿದಾಗ ಯಾರು ಏನು ಮಾತಾಡ್ತಾ ಇದ್ದರೋ ಗೊತ್ತಾಗಲೇ ಇಲ್ಲ. ಅಲ್ಲಿ ದ್ವನಿಗಳ ಸಂತೆ.
ಕೆಳಗಿಳಿದು ಬಂದು ಹುಲ್ಲು ಹಾಸಿಗೆಯ ಮೇಲೆ ಬುತ್ತಿ ಬಿಚ್ಚಿಕೊಂಡು ತಿನ್ನುವಾಗ ಜಗತ್ತಿನ ಎಲ್ಲರ ಹಸಿವೂ ನನಗೇ ಆಗಿತ್ತೇನೋ ಅನ್ನಿಸ್ತು.
ಇಂಡಿ ತಲುಪಿ ಚಾಲಕನ ಜೊತೆ ಟೀ ಕುಡಿದು ಕಾರ್ ಹತ್ತಿದ್ದೆ. ಮಿರಗಿ ತಲುಪಿದಾಗ ಸಂಜೆ ೬-೧೫. ಕಾರು ಕಂಡೊಡನೆ ಮನೆಯ ಮುಂದೆ ಕುಳಿತಿದ್ದ ಕಾಕು, ಮಾಮಿ, ಕಾಕಾ, ಅಜ್ಜಿಗಳು, ಬೆರಗುಗಣ್ನಿಂದ ನೋಡಿದರು. ರಾಜಾ ಅಲ್ಲೇನು? ಅಂದ್ರು. ಗುರುತು ಸಿಗದ ಅನೇಕರ ನಡುವೆ ಗೊತ್ತಿದ್ದ , ನೆನಪಿದ್ದ ಕಾಕಾಗಳೊಂದಿಗೆ ನೆನಪಿನ ರೀಲು ಬಿಚ್ಚಿದೆ
ಬೆಳಗಿನ ಜಾವ ೫ ಕ್ಕೆ ಎದ್ದು ಸಂಗಮೇಶ್ವರನ ದೇವಸ್ಥಾನಕ್ಕೆ ತೆರಳಿದೆ. ಅದೇ ಗುಡಿ, ಹೆಚ್ಚಿನ ಬದಲಾವಣೆ ಏನೂ ಕಂಡು ಬರಲಿಲ್ಲ. ಅದೇ ಮುಳ್ಳು ಕಂಟಿ, ಕಿರಿದಾದ ಆದರೆ ಟಾರ್ ಕಂಡ ರಸ್ತೆ. ಭೀmaa ನದಿಗಿಳಿದು ಮನಸಾರೆ ಈಜಾಡಿದೆ. ಮಂದಿರದಲ್ಲಿ ಪೂಜೆ ನಂತರ ಮಾತ್ತೆ ಮನೆಗೆ. ಮನೆಯಿಂದ ಮಂದಿರ ೨ ಕಿ.ಮೀ ದೂರ. ಊರಲ್ಲಿ ಅಡ್ಡಾಡಿದೆ. ೫೦೦೦ ಜನರಿರುವ ಸಣ್ಣ ಊರು. ಬಹಳವಾದರೆ ೪೦೦ ಮನೆಗಳಿರಬೇಕು. ರಸ್ತೆಗಳೇ ಇಲ್ಲ. ಚರಂಡಿಗಳು ಗೊತ್ತೇ ಇಲ್ಲ. ಇಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಉಹೂ ಏನೂ ಸಿಕ್ಕದು ಈಗ. ಕೇವಲ ೨೦ ವರ್ಷಗಳ ಹಿಂದೆ ಉಉರು ತುಂಬಾ ಹಾಲು ಹೈನಿನ ಸಾಮ್ರಾಜ್ಯ. ಈಗ ಏನೆಲ್ಲಾ ವ್ಯತಾಸ.

ಮೊದಲಿನ ಸ್ನೇಹ , ಸಲಿಗೆ, ಪ್ರೀತಿ ವಿಶ್ವಾಸ ಕಂಡು ಬರಲೇ ಇಲ್ಲ. ನಾ ಬಂದಿದ್ದೆ ಅನೇಕರಿಗೆ ರುಚಿಸಲಿಲ್ಲವೋ ಏನೋ. ಮಾತಿಲ್ಲ, ಕತೆ ಇಲ್ಲಾ. ಯಾಕೋ ಮನುಷ್ಯ ಸಂಬಂಧಗಳೇ ಕಳಚುತ್ತಿವೆ ಅನ್ನಿಸಿ ಮನಸ್ಸಿಗೆ ಬೇಸರವೂ ಆಯಿತು. ನನ್ನದೇ ಮನೆಯಲ್ಲಿ ನನಗೆ ರಾತ್ರಿ ಉಳಿದುಕೊಳ್ಳಲು ಸರಿಯಾದ ಅನುಕೂಲ ಆಗಲಿಲ್ಲ. ವರ್ಷಗಳ ಕಾಲ ಉಳಿದೊಕೊಳ್ಳಲು ಅವಕಾಶ ಕೊಟ್ಟವರಿಗೂ ಒಂದು ದಿನ ಸರಿಯಾದ ಅನುಕೂಲ ಕಲ್ಪಿಸಿಕೊದಲಾಗಲಿಲ್ಲ. ಕುಂದಾ ಹೇಳುವ ಹಾಗೆ ಮನುಷ್ಯ ಸಂಬಂಧಗಳು ಹೆಚ್ಚು ಸಂಕೀರ್ಣಗೊಳ್ಳುತ್ತಿವೆ. ಸ್ನೇಹ ಸಂಬಂಧಗಳೇ ಈಗ ಉತ್ತಮ .
ಸೋಮವಾರ ಕೂದಲ ಸಂಗಮದಿಂದ ಹುಬ್ಬಳ್ಳಿಗೆ ಬಂದಾಗ ಸಂಜೆ ೯-೩೦. ಕಾರ್ ಚಾಲಕ ಕಾರ್ ಜೊತೆ ಮನೆಗೆ ತೆರಳಿದ. ನಾನುಹಾಸಿಗೆಗೆ ಉರುಳಿದೆ. ತಾಸು ಬಿಟ್ಟೆದ್ದು ಊಟ ಮಾಡಿ ಮಲಗಿದಾಗ ನಿದ್ದೆ ಹತ್ತಿದ್ದೆ ಗೊತ್ತಿಲ್ಲ. 

* ಉಮಾತನಯರಾಜ
ಹುಬ್ಬಳ್ಳಿ೯೫೯೧೩೨೩೪೫೩, ೯೨೪೨೮೪೭೪೬೮
೨೫.೦೫.೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ