
ಪ್ರೀತಿಯ ಓದುಗರೇ,
ನನ್ನ ಹೆಸರು ರಾಜೇಂದ್ರ ಪಾಟೀಲ್. ನನ್ನ ಕಾವ್ಯ ನಾಮ ಉಮಾತನಯರಾಜ . ೧೯೮೪ ರಿಂದಕ್ರಿಯಾತ್ಮಕವಾಗಿದ್ದೇನೆ. ಬರವಣಿಗೆ ನನ್ನ ಉಸಿರಾಗಿದೆ. ಸಾಹಿತ್ಯ ನನ್ನ ದೇಹವಾಗಿದೆ. ಕಲೆ ನನ್ನಆಸಕ್ತಿಯಾಗಿದೆ. ಸಂಗೀತ ನನ್ನ ಹವ್ಯಾಸವಾಗಿದೆ. ಪತ್ರಿಕೋದ್ಯಮ ನನ್ನ ಉಸಿರಲ್ಲಿ ಬೆರೆತುಹೋಗಿದೆ.
೧೯೮೪ ರಿಂದ ಕಥೀ ಕವನ ಲೇಖನ, ಹನಿಗವನ, ಮಕ್ಕಳ ಸಾಹಿತ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಕನ್ನಡ ನಾಡಿನ ಹೆಮ್ಮೆಯ ದಿನಪತ್ರಿಕೆ ಸಂಯುಕ್ತ ಕರ್ನಾಟಕ , ಪ್ರಜಾವಾಣಿ, ಸುಧಾ , ತರಂಗ, ರಾಗ ಸಂಗಮ, ಮಂಗಳ, ಮಯೂರ, ಮಲ್ಲಿಗೆ, ಸುದ್ದಿಸಂಗಾತಿ, ಇತ್ಯಾದಿ ಪತ್ರಿಕೆಗಲ್ಲಿ ನನ್ನ ಬರಹಗಳು ಪ್ರಕಟವಾಗುತ್ತ ಬಂದಿವೆ.
ಕಲಬುರ್ಗಿ , ಧಾರವಾಡ ಆಕಾಶವಾಣಿಯಲ್ಲಿ ನನ್ನ ಕವನಗಳು ಪ್ರಸಾರಗೊಂಡಿವೆ. ಸಿಸು ಸಂಗಮೇಶ, ಸಂಗಮೇಶ ಗುಜಗೊಂಡ,ರಾಜಶೇಖರ ಕುಕ್ಕುಂದಾ , ವೆಂಕಟೇಶ, ಅಮ್ಮ ಉಮಾ ಶಂಕರರಾವ್ , ಅಪ್ಪ ಶಂಕರರಾವ್ , ನೇಪಥ್ಯಕ್ಕೆ ಸರಿದಿರುವ ತಂಗಿಸುವರ್ಣ , ಕಲಬುರ್ಗಿಯ ಗ್ರಿನೋಬಲ್ಸ್ ಪತ್ರಿಕೆ ಸಂಪಾದಕ ರಾಜೇಂದ್ರ ಪಾಟೀಲ , ಚಿಂತಕ ಸಂಪಾದಕಿ ಶೀಲಾ ತಿವಾರಿ, ಹಿರಿಯಕವಿ ಎ.ಕೆ.ರಾಮೇಶ್ವರ, ಆಕಾಶವಾಣಿಯ ಡಾ. ಬಸವರಾಜ ಸಾದರ , ಅನಿಲ ದೇಸಾಯಿ, ಬಸು ಬೇವಿನಮರದ , ನಾಗತಿಹಳ್ಳಿಚಂದ್ರಶೇಖರ , ಚಿತ್ರ ಶೇಖರ ಕಂಠಿ, ಶಂಕರಯ್ಯ ಘಂಟಿ, ಗಿರಿಜಾ ಚಾಪುಸ್ಕರ್ (ಪುಜಾರಿ ) , ಧರ್ಮರಾಜ ಪೂಜಾರಿ, ಮಲ್ಲಿಕಾರ್ಜುನ ಶೆಟ್ಟಿ, ಬೆಳಗಾವಿಯ ಕನ್ನಡಮ್ಮ ಸಂಪಾದಕಿ ಉಮಾದೇವಿ , ಕರ್ನಾಟಕ ಪತ್ಯಪುಸ್ತಕ ಸಂಘ, ಪುಣೆಯ ಕನ್ನಡ ಪಥ್ಯಪುಸ್ತಕ , ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರಕಾಶ ಖಾಡೆ, ವಿಜಯಲಕ್ಷ್ಮಿ, ಚಂದ್ರಕಲಾ , ಪಿ.ಶೇಷಾದ್ರಿ, ಸಂಯುಕ್ತ ಕರ್ನಾಟಕದ ನನ್ನ ಹಿರಿಯರು, ಮಿತ್ರರು, ಸಹೋದ್ಯೋಗಿಗಳು, ಅವರ ಪ್ರೋತ್ಸಾಹ ಇಲ್ಲಿ ಉಲ್ಲೇಖನೀಯ. ಶ್ರೀಮತಿ ತೇಜಸ್ವಿನಿ ಅನಂತಕುಮಾರ ಅವರು ತಮ್ಮ ಆಟ ಪಾಠಯೋಜನೆಯಲ್ಲಿ ನನ್ನ ಕವನ ತಂಗಿಯ ಪತ್ರ ವನ್ನು ಅಳವಡಿಸಿಕೊಂಡಿದ್ದಾರೆ. ಅದೇ ಕವಿತೆ ಮಹಾರಾಷ್ಟ್ರ ದ ೧ ನೆಯ ಮತ್ತುಕರ್ನಾಟಕದ ೨ ನೆಯ ತರಗತಿಗೆ ಕಳೆದ ೧೦ ವರ್ಷಗಳಿಂದ ಅಳವಡಿಸಿದೆ.
ಹಲವಾರು ಕವಿಗೊಷ್ಥಿಗಳಲ್ಲಿ ಭಾಗಿಯಾಗಿದ್ದೇನೆ . ಇದು ನನ್ನ ಜೀವನ ಚಿತ್ರ . ಸಧ್ಯ ಕನ್ನಡದ ಜೀವ ನಾಡಿ ಸಂಯುಕ್ತ ಕರ್ನಾಟಕಉದ್ಯೋಗಿ. ಅಲ್ಲಿ ಉಪಸಂಪಾದಕನಾಗಿ ಕಾರ್ಯ ನಿರ್ವಹಣೆ ನಡೆದಿದೆ. ಸಣ್ಣದೊಂದು ಬ್ರೇಕ್ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ. ಮುಂದೆ ಓದಿ.ನಿಮ್ಮ
ಉಮಾತನಯರಾಜ
೯೫೯೧೩೨೩೪೫೩, 9242847468ಹುಬ್ಬಳ್ಳಿ
೧೯.೦೫.೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ