ಬೆಳಗಾವಿಯ ಕುಂದಾ ಮತ್ತು ಹುಬ್ಬಳ್ಳಿಯ ಗಿರಮಿಟ್ ಅದು ಹೇಗೋಒಂದನ್ನೊಂದು ಸಂಧಿಸಿದವು. ಮುಗುಳುನಗೆಯ ವಿನಿಮಯ ಆಯಿತು. ಮಾತು ಕತೆ ಹರಟೆ ಸಾಂಗವಾಗಿ ಶುರುವಾಯಿತು. ಮಾತುಮೌನವಾಯಿತು ಸಂದೇಶಗಳ ಭರಪೂರ ಮಳೆ ಶುರುವಾಯಿತು. ಶುಭೋದಯ, ಶುಭ ರಾತ್ರಿಗಳ ವಿನಿಮಯ ಸಂಭ್ರಮ. ಏನೋ ಹೇಳುವತವಕ, ಏನೋ ಕೇಳುವ ಕಾತರ. ಎದೆಯಲ್ಲಿ ಎಂಥದೋ ಸಮ್ಮಿಶ್ರಭಾವಗಳ ಸಂತೆ.ಕುಂದಾ ಎದುರಿಗೆ ಬಂದರೆ ಹೇಗೆ . ಹೇಗೆ ಪ್ರತಿಕ್ರಿಯಿಸಲಿ ಎಂಬ ತರ್ಕಗಿರಮಿಟ್ ಮನದಲ್ಲಿ. ಕುಂದಾ ತನ್ನ ತವರು ಮನೆಗೆ ಹೋಗಿತ್ತು. ಗಿರಮಿಟ್ ಇಲ್ಲಿ ಕುಂದಾ ಸಂದೇಶಕ್ಕಾಗಿ ಕಾಯುತ್ತಿತ್ತು. ಕುಂದಾಅದೇಕೋ ಮೌನವಾಗಿತ್ತು. ಈ ಮೌನ ಗಿರಮಿಟ್ ಗೆ ಅಸಹನೀಯವಾಗಿತ್ತು. ಗಿರಮಿಟ್ ಮ್ಲಾನವದನವಾಗಿತ್ತು. ಎದೆಯಭಾವನೆಗಳು ಮೌನದ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದವು . ಅಂತೂ ಆ ಸಂಜೆ ಕುಂದಾ ಅನಾವರಣ. ಗಿರಮಿಟ್ ಎದೆಯಲ್ಲಿ ನಗಾರಿಬಾರಿಸಿದ ಹಾಗೆ. ಎದೆಯ ನಿಲ್ದಾಣದಲ್ಲಿ ಹರಿಪ್ರಿಯ ಎಕ್ಸಪ್ರೆಸ್ ಹಾದುಹೋದ ಹಾಗೆ. ಕುಂದಾ ಸಿಹಿಯಾಗಿ ನಕ್ಕಳು. ಅವಳ ಕಿಲ ಕಿಲನಗೆಗೆ ಕೋಗಿಲೆ ನಾಚಿ ಭರ್ತಿ ಎರಡು ದಿನ ರಜೆ
ತೆಗೆದುಕೊಂಡಿತು. ಗಿರಮಿಟ್ ಎದೆಯಲ್ಲಿ ಸಾವಿರ ಸಾವಿರ ಗುಲಾಬಿಗಳುಏಕಕಾಲಕ್ಕೆ ಅರಳಿದವು. ಘಮ ಘಮಿಸಿದವು. ಗಿರಮಿಟ್ ಎದೆಯ ಮೇಲೆ ಕೈ ಇಟ್ಟುಕೊಂಡು ಹಾಯ್ಅಂತು. ಇದ್ದಕ್ಕಿದಂತೆ ಚುರ್ರ್ ಅಂತ ಸಪ್ಪಳ. ಗಿರಮಿಟ್ ಕಣ್ಣು ತಿಕ್ಕಿಕೊಂಡು ನೋಡಿತು. ಸಂಜೆಯಾಗುತ್ತಿತ್ತು. ಗಿರಮಿಟ್ ಮಾಲೀಕ ಬಾಣಲೆಗೆ ಎಣ್ಣೆ ಹಾಕಿದ್ದ. ಪಕ್ಕದಲ್ಲಿ ಹೋಳು ಹೋಳು ಈರುಳ್ಳಿ, ಕೊತಂಬರಿ ನಗುತ್ತಿದ್ದವು. ಇದನ್ನು ಕೇಳಿ ಕುಂದಾ ನಕ್ಕಿದ್ದೆ ನಕ್ಕಿದ್ದು. ನೀವು ?* ಉಮಾತನಯರಾಜ
ಹುಬ್ಬಳ್ಳಿ.
೧೯.೦೫.೨೦೧೦
ಬುಧವಾರ ೯೫೯೧೩ ೨೩೪೫೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ